Dailyhunt Logo
  • Light mode
    Follow system
    Dark mode
    • Play Story
    • App Story
ದಾವಣಗೆರೆ ಗ್ರಾಹಕರ ಗಮನಕ್ಕೆ: ಜುಲೈ 4ರ ನಾಳೆ ಈ ಪ್ರದೇಶಗಳಲ್ಲಿ 6 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ!

ದಾವಣಗೆರೆ ಗ್ರಾಹಕರ ಗಮನಕ್ಕೆ: ಜುಲೈ 4ರ ನಾಳೆ ಈ ಪ್ರದೇಶಗಳಲ್ಲಿ 6 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ!

Suddikshana 2 weeks ago

ದಾವಣಗೆರೆ: ನಗರದ ವಿವಿಧ ಬಡಾವಣೆಗಳ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 4 ರ ಶನಿವಾರದಂದು ಬೆಳಿಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತಿಳಿಸಿದೆ.

66/11 ಕೆವಿ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್04-ಬಿಟಿ ಮತ್ತು ಎಫ್11-ಎಲ್‍ಎಫ್1 ಫೀಡರ್ ಮಾರ್ಗಗಳಲ್ಲಿ ತುರ್ತು 'ಜಲಸಿರಿ ಕಾಮಗಾರಿ' ನಿರ್ವಹಿಸಬೇಕಾಗಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.

ದಿನಾಂಕ: ಜುಲೈ 4, 2026 (ಶನಿವಾರ)

ಸಮಯ: ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 04:00 ಗಂಟೆಯವರೆಗೆ (ಒಟ್ಟು 6 ಗಂಟೆಗಳು)

ಆಜಾದ್ ನಗರ ಮತ್ತು ಸುತ್ತಮುತ್ತ

ಬಿ.ಡಿ. ಲೇಔಟ್

ವೆಂಕಭೋವಿ ಕಾಲೋನಿ

ಜೋಗಲ್ ಬಾಬಾ ಲೇಔಟ್

ಮಾಗನಹಳ್ಳಿ ರಸ್ತೆ ಸುತ್ತಮುತ್ತ

ಮಂಡಕ್ಕಿ ಬಟ್ಟಿ

ಕಾರ್ಲ್ ಮಾರ್ಕ್ಸ್ ನಗರ

ಸಿದ್ದರಾಮೇಶ್ವರ ಬಡಾವಣೆ

ಶಿವಪಾರ್ವತಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

Dailyhunt
Disclaimer: This content has not been generated, created or edited by Dailyhunt. Publisher: Suddikshana