Dailyhunt Logo
  • Light mode
    Follow system
    Dark mode
    • Play Story
    • App Story
KPSC KAS Recruitment 2026: 319 ಕೆಎಎಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ ಅಧಿಸೂಚನೆ ಪ್ರಕಟ; ಅರ್ಹತೆ, ಅರ್ಜಿ ವಿವರ ಇಲ್ಲಿದೆ!

KPSC KAS Recruitment 2026: 319 ಕೆಎಎಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ ಅಧಿಸೂಚನೆ ಪ್ರಕಟ; ಅರ್ಹತೆ, ಅರ್ಜಿ ವಿವರ ಇಲ್ಲಿದೆ!

Suddikshana 3 months ago

ಬೆಂಗಳೂರು: ಕರ್ನಾಟಕ ಸರ್ಕಾರಿ ಸೇವೆಯ ಉನ್ನತ ಹುದ್ದೆಗಳನ್ನು ಸೇರ ಬಯಸುವ ಉದ್ಯೋಗ ಆಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು (KPSC) ಸಿಹಿ ಸುದ್ದಿ ನೀಡಿದೆ. 2026-27ನೇ ಸಾಲಿನ ಒಟ್ಟು 319 KAS ಗ್ರೂಪ್‌-ಎ ಮತ್ತು ಗ್ರೂಪ್‌-ಬಿ (ಗೆಜೆಟೆಡ್ ಪ್ರೊಬೇಷನರ್ಸ್) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ನೇಮಕಾತಿ ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ (KPSC)

ಹುದ್ದೆಯ ಹೆಸರು: KAS ಗ್ರೂಪ್‌ 'ಎ' ಮತ್ತು 'ಬಿ' ಗೆಜೆಟೆಡ್ ಪ್ರೊಬೇಷನರ್ಸ್‌

ಒಟ್ಟು ಹುದ್ದೆಗಳು: 319

ಉದ್ಯೋಗ ಸ್ಥಳ: ಕರ್ನಾಟಕ

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree), ಸ್ನಾತಕೋತ್ತರ ಪದವಿ (Post Graduation) ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ:

ಕನಿಷ್ಠ ವಯಸ್ಸು: 21 ವರ್ಷಗಳು

ಗರಿಷ್ಠ ವಯಸ್ಸು: 40 ವರ್ಷಗಳು

ವಯೋಸಹಡಿ ಸಡಿಲಿಕೆ:

2A, 2B, 3A, 3B ಅಭ್ಯರ್ಥಿಗಳಿಗೆ: 03 ವರ್ಷಗಳು

SC/ST ಅಭ್ಯರ್ಥಿಗಳಿಗೆ: 05 ವರ್ಷಗಳು

ಸಾಮಾನ್ಯ ಅಭ್ಯರ್ಥಿಗಳು (General): ₹600/-

ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳು: ₹300/-

ಮಾಜಿ ಸೈನಿಕರು / ವಿಕಲಚೇತನರು: ₹50/-

SC/ST ಅಭ್ಯರ್ಥಿಗಳು: ಉಚಿತ (ಶುಲ್ಕ ವಿನಾಯಿತಿ ನೀಡಲಾಗಿದೆ)

ಪಾವತಿ ವಿಧಾನ: ಆನ್‌ಲೈನ್ (Online Payment)

ಪೂರ್ವಭಾವಿ ಪರೀಕ್ಷೆ (Prelims Examination)

ಮುಖ್ಯ ಪರೀಕ್ಷೆ (Mains Examination)

ಸಂದರ್ಶನ / ವ್ಯಕ್ತಿತ್ವ ಪರೀಕ್ಷೆ (Interview / Personality Test)

ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ kpsc.kar.nic.in ಗೆ ಭೇಟಿ ನೀಡಿ.

'KAS Group-A & B Gazetted Probationers 2026-27' ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ವಿವರಗಳನ್ನು ನಮೂದಿಸಿ, ಅಗತ್ಯ ದಾಖಲೆಗಳು ಹಾಗೂ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ.

ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ.

ಅರ್ಜಿ ನಮೂದೆಯನ್ನು ಪರಿಶೀಲಿಸಿ 'Submit' ಬಟನ್ ಕ್ಲಿಕ್ ಮಾಡಿ, ಮುಂದಿನ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದಿರಿಸಿಕೊಳ್ಳಿ.

Dailyhunt
Disclaimer: This content has not been generated, created or edited by Dailyhunt. Publisher: Suddikshana