Dailyhunt Logo
  • Light mode
    Follow system
    Dark mode
    • Play Story
    • App Story
ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಪತ್ರಕರ್ತ ತರುಣ್ ತೇಜ್‌ಪಾಲ್ ದೋಷಿ: ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡುತ್ತಿದ್ದಂತೆ 'ನನಗೆ 62 ವರ್ಷ, ದಯವಿಟ್ಟು ಕರುಣೆ ತೋರಿ' ಎಂದು ಕಣ್ಣೀರಿಟ್ಟ ಅಪರಾಧಿ!

ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಪತ್ರಕರ್ತ ತರುಣ್ ತೇಜ್‌ಪಾಲ್ ದೋಷಿ: ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡುತ್ತಿದ್ದಂತೆ 'ನನಗೆ 62 ವರ್ಷ, ದಯವಿಟ್ಟು ಕರುಣೆ ತೋರಿ' ಎಂದು ಕಣ್ಣೀರಿಟ್ಟ ಅಪರಾಧಿ!

Suddikshana 2 days ago

ಣಜಿ (ಗೋವಾ):ತೆಹಲ್ಕಾ ನಿಯತಕಾಲಿಕೆಯ (Tehelka Magazine) ಸಂಸ್ಥಾಪಕ ಮತ್ತು ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ (Tarun Tejpal) ಅವರಿಗೆ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಬಿಗ್ ಶಾಕ್ ನೀಡಿದೆ.2013ರಲ್ಲಿ ತಮ್ಮ ಮಹಿಳಾ ಸಹೋದ್ಯೋಗಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತರುಣ್ ತೇಜ್‌ಪಾಲ್ ಅವರನ್ನು ಹೈಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ.

2021ರಲ್ಲಿ ಗೋವಾದ ವಿಚಾರಣಾ ನ್ಯಾಯಾಲಯವು (Trial Court) ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿ ಹೊರಡಿಸಿದ್ದ ಆದೇಶವನ್ನು ವಜಾಗೊಳಿಸಿರುವ ಹೈಕೋರ್ಟ್, ಈ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ.

ನವೆಂಬರ್ 2013ರಲ್ಲಿ ಗೋವಾದ ಪಂಚತಾರಾ ರೆಸಾರ್ಟ್‌ನಲ್ಲಿ ನಡೆದ 'ತಹಲ್ಕಾ ಥಿಂಕ್‌ಫೆಸ್ಟ್' (Thinkfest) ಕಾರ್ಯಕ್ರಮದ ವೇಳೆ, ರೆಸಾರ್ಟ್‌ನ ಲಿಫ್ಟ್‌ನಲ್ಲಿ ತೇಜ್‌ಪಾಲ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂಸ್ಥೆಯ ಯುವ ಮಹಿಳಾ ಪತ್ರಕರ್ತೆಯೊಬ್ಬರು ಗಂಭೀರ ಆರೋಪ ಮಾಡಿದ್ದರು.ಈ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.

ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಮತ್ತು ಅಮಿತ್ ಜಾಮಸಂದೇಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ವಿಚಾರಣೆ ನಡೆಸಿ, ತರುಣ್ ತೇಜ್‌ಪಾಲ್ ಅವರನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376(2)(f) (ಅಧಿಕಾರದಲ್ಲಿದ್ದ ವ್ಯಕ್ತಿಯಿಂದ ಅತ್ಯಾಚಾರ), ಸೆಕ್ಷನ್ 376(2)(k), ಸೆಕ್ಷನ್ 354A (ಲೈಂಗಿಕ ಕಿರುಕುಳ) ಹಾಗೂ ಸೆಕ್ಷನ್ 354B ಅಡಿಯಲ್ಲಿ ದೋಷಿ ಎಂದು ಘೋಷಿಸಿದೆ.

ತೀರ್ಪು ಪ್ರಕಟವಾಗುವ ವೇಳೆ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ 62 ವರ್ಷದ ತರುಣ್ ತೇಜ್‌ಪಾಲ್, 'ನನಗೆ ಈಗ 62 ವರ್ಷ ವಯಸ್ಸಾಗಿದೆ. ನಾನೇ ಈ ಪ್ರಕರಣದಲ್ಲಿ ಸಂತ್ರಸ್ತ. ನನಗೆ ಹೆಂಡತಿಯಿದ್ದು, ಬೇರೇನೂ ಹೇಳಲಾರೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ನನ್ನ ವಯಸ್ಸನ್ನು ಪರಿಗಣಿಸಿ ಕರುಣೆ ತೋರಬೇಕು' ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.

ತೇಜ್‌ಪಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಆಬಾದ್ ಪೋಂಡಾ, ತೀರ್ಪಿನ ಜಾರಿಗೆ 8 ವಾರಗಳ ಕಾಲ ತಡೆ ನೀಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅವಕಾಶ ನೀಡಬೇಕೆಂದು ಕೋರಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddikshana