Dailyhunt Logo
  • Light mode
    Follow system
    Dark mode
    • Play Story
    • App Story
ರಕ್ಷಾಬಂಧನದ ಸಂಭ್ರಮದ ನಡುವೆಯೇ ಸೋದರಿಯ ಕನಸು ಭಗ್ನ: ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಮೂರು ತಿಂಗಳ ಗರ್ಭಿಣಿ ಸಾವು!

ರಕ್ಷಾಬಂಧನದ ಸಂಭ್ರಮದ ನಡುವೆಯೇ ಸೋದರಿಯ ಕನಸು ಭಗ್ನ: ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಮೂರು ತಿಂಗಳ ಗರ್ಭಿಣಿ ಸಾವು!

Suddikshana 6 days ago

ಝಾನ್ಸಿ (ಉತ್ತರ ಪ್ರದೇಶ): ರಕ್ಷಾಬಂಧನ ಹಬ್ಬದ ಅಂಗವಾಗಿ ತವರು ಮನೆಗೆ ಆಗಮಿಸಿದ್ದ 24 ವರ್ಷದ ಗರ್ಭಿಣಿಯೊಬ್ಬರು ವೇಗವಾಗಿ ಬಂದ ಕಾರು ಡಿಕ್ಕಿಯಾದ ಪರಿಣಾಮ ದುರಂತವಾಗಿ ಪ್ರಾಣ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.

ಲಲಿತ್‌ಪುರದ ನಿವಾಸಿಯಾದ ಪಲಕ್ ಎಂಬವರೇ ಮೃತಪಟ್ಟ ದುರದೃಷ್ಟಕರ ಮಹಿಳೆ.

2025ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದ ಇವರು, ಮೂರು ತಿಂಗಳ ಗರ್ಭಿಣಿಯಾಗಿದ್ದರು.ಹಬ್ಬದ ಹಿನ್ನೆಲೆಯಲ್ಲಿ ಸಹೋದರ ಹಾಗೂ ಕುಟುಂಬದವರೊಂದಿಗೆ ಸಮಯ ಕಳೆಯಲು ಖುಷಿಪುರದಲ್ಲಿರುವ ತವರು ಮನೆಗೆ ಬಂದಿದ್ದರು.

ಸೋಮವಾರ ರಾತ್ರಿ ಕುಟುಂಬದ 10-11 ಸದಸ್ಯರೊಂದಿಗೆ ರಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಹೊರಬಂದ ಕುಟುಂಬಸ್ಥರು, ರಸ್ತೆ ಬದಿಯ ಐಸ್‌ಕ್ರೀಮ್ ಬಂಡಿಯ ಬಳಿ ನಿಂತಿದ್ದರು.ಈ ವೇಳೆ ಅತೀ ವೇಗವಾಗಿ ಬಂದ ಕಾರೊಂದು ಐಸ್‌ಕ್ರೀಮ್ ಬಂಡಿ ಸೇರಿದಂತೆ ಸಾರ್ವಜನಿಕರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ.ಈ ಭೀಕರ ಅಪಘಾತದಲ್ಲಿ 11ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದು, ತೀವ್ರ ಗಾಯಗೊಂಡಿದ್ದ ಪಲಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕಾರು ಹಲವು ವಾಹನಗಳಿಗೆ ಹಾಗೂ ಜನರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.ಘಟನಾ ಸ್ಥಳಕ್ಕೆ ತಕ್ಷಣವೇ ಆಗಮಿಸಿದ ನವಾಬಾದ್ ಠಾಣೆ ಪೊಲೀಸರು, ಚಾಲಕ ಶಿವನ್ ಎಂಬಾತನನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddikshana