Dailyhunt
ಐಸಿಎಸ್‌ಇ 10 ನೇ ತರಗತಿ ಫಲಿತಾಂಶ | ವಿದ್ಯಾ ವಿಕಾಸ ಶಾಲೆಗೆ ಶೇ. 100 ರಷ್ಟು ಫಲಿತಾಂಶ

ಐಸಿಎಸ್‌ಇ 10 ನೇ ತರಗತಿ ಫಲಿತಾಂಶ | ವಿದ್ಯಾ ವಿಕಾಸ ಶಾಲೆಗೆ ಶೇ. 100 ರಷ್ಟು ಫಲಿತಾಂಶ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 30 : ನಗರದ ಪ್ರತಿಷ್ಠಿತ ಶಾಲೆಗಳಲ್ಲೊಂದಾದ ವಿದ್ಯಾ ವಿಕಾಸ ಐಸಿಎಸ್‍ಇ ಸ್ಕೂಲ್‍ನ ಪ್ರಥಮ ಬ್ಯಾಚ್‍ನ ವಿದ್ಯಾರ್ಥಿಗಳು 2025-26ನೇ ಸಾಲಿನ 10ನೇ ತರಗತಿ ICSE BOARD EXAM ನಲ್ಲಿ ಶೇಕಡ 100% ರಷ್ಟು ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಪ್ರಥಮ ಶೈಕ್ಷಣಿಕ ವರ್ಷದಲ್ಲೇ 2025-26ನೇ ಸಾಲಿನ 10ನೇ ತರಗತಿ ಫಲಿತಾಂಶದಲ್ಲಿ ಶಾಲೆಯ ವಿದ್ಯಾರ್ಥಿನಿಯಾದ ಶ್ರೀಶಾ ಎಸ್ ರೆಡ್ಡಿ ಅವರು ಶೇ.97.40% ಗಳಿಸಿ ಜಿಲ್ಲಾ ಮಟ್ಟದಲ್ಲಿ 2ನೆ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಈ ಬಾರಿಯ ICSE BOARD EXAM ನಲ್ಲಿ 43 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, ಇದರಲ್ಲಿ 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ (ಶೇ.85ಕ್ಕಿಂತ ಹೆಚ್ಚು ಅಂಕ), 26 ವಿದ್ಯಾರ್ಥಿಗಳು ಪ್ರಥಮ ದರ್ಜೆ (ಶೇ.60 ರಿಂದ 84% ಕ್ಕಿಂತ ಹೆಚ್ಚು ಅಂಕ), ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆ (ಶೇ.50ಕ್ಕಿಂತ ಹೆಚ್ಚು ಅಂಕ) ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.

ವಿದ್ಯಾರ್ಥಿಗಳ ಈ ಉತ್ಕøಷ್ಠ ಫಲಿತಾಂಶವು ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ, ಹಾಗೂ ಪೋಷಕರ ಸಹಕಾರದ ಫಲವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddione