Dailyhunt
ಅನ್ನದಾತನ ಕೈ ಬಲಪಡಿಸಿದ ಪ್ರಧಾನಿ ಮೋದಿ :  ನಂದಿ ನಾಗರಾಜ್

ಅನ್ನದಾತನ ಕೈ ಬಲಪಡಿಸಿದ ಪ್ರಧಾನಿ ಮೋದಿ : ನಂದಿ ನಾಗರಾಜ್

ಸುದ್ದಿಒನ್, ಚಿತ್ರದುರ್ಗ, (ಮೇ.22) : ಅನ್ನದಾತ ರೈತನ ಕೈಬಲಪಡಿಸಲು ಪ್ರಧಾನಿ ನರೇಂದ್ರಮೋದಿರವರು ಡಿಎಪಿ ರಸಗೊಬ್ಬರ ಸಬ್ಸಿಡಿ ಪ್ರಮಾಣವನ್ನು ಶೇ.140 ರಷ್ಟು ಹೆಚ್ಚಿಸಿರುವುದನ್ನು ಬಿಜೆಪಿ ಚಿತ್ರದುರ್ಗ ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್ ಸ್ವಾಗತಿಸಿದ್ದಾರೆ.

2,400 ರೂ.ಗೆ ತಲುಪಿದ್ದ ಡಿಎಪಿ ಬೆಲೆಯನ್ನು 1200 ರೂ.ಗೆ ಇಳಿಸಿ ರೈತ ಸಮೂಹಕ್ಕೆ ಕೇಂದ್ರ ಸರ್ಕಾರ ಅನುಕೂಲ ಮಾಡಿ ಸಬ್ಸಿಡಿಗಾಗಿ 14775 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಅದಕ್ಕಾಗಿ ದೇಶದ ಪ್ರಧಾನಿ ಮೋದಿ ಹಾಗೂ ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡರಿಗೆ ನಂದಿ ನಾಗರಾಜ್ ಅಭಿನಂದಿಸಿ ಕೊರೋನಾ ಎರಡನೆ ಹಂತದ ಅಲೆ ಪರಿಹಾರವಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 1250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿರುವುದನ್ನು ಶ್ಲಾಘಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddione