Dailyhunt Logo
  • Light mode
    Follow system
    Dark mode
    • Play Story
    • App Story

ಬೆಳಗಾವಿ ಅಖಾಡಕ್ಕೆ ಸತೀಶ್ ಜಾರಕಿಹೊಳಿ ?

ಬೆಳಗಾವಿ : ಯಾವ ಕ್ಷಣದಲ್ಲದರೂ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಬಹುದು. ಈಗಾಗಲೇ ಬಿಜೆಪಿ ಸುರೇಶ್ ಅಂಗಡಿ ಪುತ್ರಿಯನ್ನು ಕಣಕ್ಕಿಳಿಸಲು ಅಂತಿಮ ಹಂತದ ನಿರ್ಧಾರದಲ್ಲಿದೆ. ಆದರೆ ಕಾಂಗ್ರೆಸ್ ಪುನಃ ಗೊಂದಲಕ್ಕೆ ಸಿಲುಕಿದೆ.

ಇಷ್ಟು ದಿನ ಕಾಂಗ್ರೆಸ್‍ನಿಂದ ಸತೀಶ್ ಜಾರಕಿಹೊಳಿ ಬಹುತೇಕ ಖಚಿತ ಎನ್ನಲಾಗುತ್ತಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಜಾರಕಿಹೊಳಿ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಹೈಕಮಾಂಡ್ ಸೂಚನೆ ಹಿನ್ನಲೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಭಾರಿ ಸರ್ಕಸ್ ನಡೆಸುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಸತೀಶ್ ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

ಸತೀಶ್ ಕಣಕ್ಕಿಳಿದರೆ ಪ್ರಬಲವಾದ ಪೈಪೋಟಿ ನೀಡಬಹುದು. ಇಲ್ಲವಾದಲ್ಲಿ ಚುನಾವಣೆ ಅಖಾಡದಲ್ಲಿ ಸೆಣಸಾಡುವುದು ಕಷ್ಟ ಆಗಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಚಾರ.

ಇದೀಗ ಎಲ್ಲರ ಚಿತ್ತ ಜಾರಕಿಹೊಳಿ ಅತ್ತ ಎನ್ನಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddione