by suddionenews September 15, 2021, 7:28 PM 275 Views
ನವದೆಹಲಿ: ತಮ್ಮ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಾರೆಂದು ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.
ಲಕ್ಷ್ಮಿ ದೇವಿಯು ಒಬ್ಬರ ಗುರಿ ಸಾಧಿಸಲು ಸಹಾಯ ಮಾಡುತ್ತಾರೆ. ದುರ್ಗಾ ದೇವಿಯು ರಕ್ಷಿಸುವ ಶಕ್ತಿಯನ್ನು ಹೊಂದಿದ್ದಾರೆ. ಅವರು ಯಾವ ರೀತಿಯ ಹಿಂದುಗಳು? ಅವರು ನಕಲಿ ಹಿಂದುಗಳು. ಅವರು ಹಿಂದೂ ಧರ್ಮವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರು ಧರ್ಮದ ದಲ್ಲಾಳಿಗಳು ಎಂದು ಕಿಡಿಕಾರಿದ್ದಾರೆ.
ಮಹಾತ್ಮ ಗಾಂಧಿ ಅವರ ಚಿತ್ರವನ್ನು ನೀವು ನೋಡಿದರೆ, ಅವರ ಸುತ್ತಲೂ 2-3 ಮಹಿಳೆಯರು ಇರುವುದನ್ನು ಕಾಣುತ್ತೀರಿ. ಮೋಹನ್ ಭಾಗವತ್ (ಆರೆಸ್ಸೆಸ್ ಮುಖ್ಯಸ್ಥ) ಹೀಗೆ ಯಾವುದಾದರೂ ಮಹಿಳೆ ಜತೆಗೆ ಇರುವ ಚಿತ್ರವನ್ನು ನೋಡಿದ್ದೀರಾ? ಇದು ಏಕೆಂದರೆ, ಅವರ ಸಂಘಟನೆಯು ಮಹಿಳೆಯರನ್ನು ಶೋಷಿಸುತ್ತದೆ ಎಂದಿದ್ದಾರೆ.

