Dailyhunt Logo
  • Light mode
    Follow system
    Dark mode
    • Play Story
    • App Story
BREAKING : ಏಷ್ಯನ್ ಗೇಮ್ಸ್ ಕುಸ್ತಿಯಲ್ಲಿ ಭಾರತ `ಅಮನ್'ಗೆ ಚಿನ್ನದ ಪದಕ

BREAKING : ಏಷ್ಯನ್ ಗೇಮ್ಸ್ ಕುಸ್ತಿಯಲ್ಲಿ ಭಾರತ `ಅಮನ್'ಗೆ ಚಿನ್ನದ ಪದಕ

ನವದೆಹಲಿ : ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಕ್ರೀಡಾಪಟುಗಳ ಅಮೋಘ ಸಾಧನೆ ಮುಂದುವರಿದಿದ್ದು, ಕುಸ್ತಿಯಲ್ಲಿ ಭಾರತ ಮತ್ತೊಂದು ಐತಿಹಾಸಿಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.

ಭಾರತದ ಭರವಸೆಯ ಕುಸ್ತಿಪಟು ಅಮನ್ ಅವರು ಪುರುಷರ ವಿಭಾಗದ ಫೈನಲ್ ಹಣಾಹಣಿಯಲ್ಲಿ ಉತ್ತರ ಕೊರಿಯಾದ ಹ್ಯಾನ್ ಚೊಂಗ್-ಸಾಂಗ್ ವಿರುದ್ಧ ಏಕಪಕ್ಷೀಯ ಪಾರಮ್ಯ ಮೆರೆದು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ದಾಳಿ ನಡೆಸಿದ ಅಮನ್, ಎದುರಾಳಿಗೆ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ಅವಕಾಶ ನೀಡದೆ ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡರು. ಅಮನ್ ಅವರ ಈ ಐತಿಹಾಸಿಕ ಗೆಲುವಿನೊಂದಿಗೆ ಪ್ರಸಕ್ತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ ಇಪ್ಪತ್ತಕ್ಕೆ ಏರಿಕೆಯಾಗಿದ್ದು, ಪದಕ ಪಟ್ಟಿಯಲ್ಲಿ ಭಾರತದ ಸ್ಥಾನ ಮತ್ತಷ್ಟು ಭದ್ರವಾಗಿದೆ. ಅಮನ್ ಅವರ ಈ ಸಾಹಸಮಯ ಸಾಧನೆಗೆ ಕ್ರೀಡಾಭಿಮಾನಿಗಳಿಂದ ಹಾಗೂ ಗಣ್ಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddione