Dailyhunt Logo
  • Light mode
    Follow system
    Dark mode
    • Play Story
    • App Story
BREAKING NEWS : 27ನೇ ವಯಸ್ಸಿನಲ್ಲೇ ಬಾಲಿವುಡ್ ಖ್ಯಾತ ನಟಿ ಅನನ್ಯಾ ರಾಜ್ ನಿಧನ

BREAKING NEWS : 27ನೇ ವಯಸ್ಸಿನಲ್ಲೇ ಬಾಲಿವುಡ್ ಖ್ಯಾತ ನಟಿ ಅನನ್ಯಾ ರಾಜ್ ನಿಧನ

ಮುಂಬೈ.ಆಗಸ್ಟ್.17: ಬಾಲಿವುಡ್‌ ನಟಿ ಅನನ್ಯಾ ರಾಜ್ (27) ನಿಧನರಾಗಿರುವ ಸುದ್ದಿ ಚಿತ್ರರಂಗಕ್ಕೆ ಆಘಾತ ತಂದಿದೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದ ಅನನ್ಯಾ ರಾಜ್ ಅವರು ಜುಲೈ 15, 2026ರಂದು ನಿಧನರಾಗಿದ್ದಾರೆ. ಆದರೆ ಅವರ ನಿಧನದ ವಿಷಯವನ್ನು ಕುಟುಂಬದವರು ಸುಮಾರು ಒಂದು ತಿಂಗಳ ಬಳಿಕ, ಆಗಸ್ಟ್ 16ರಂದು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.

ಅನನ್ಯಾ ರಾಜ್ ಅವರು ಜುಲೈ 15ರ ಮುಂಜಾನೆ ನಿದ್ರೆಯಲ್ಲೇ ಶಾಂತಿಯುತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ತಿಳಿಸಿದೆ. ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಅವರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಕಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಿದ್ದರು ಎಂದು ಕುಟುಂಬ ಹೇಳಿದೆ.

ಅನನ್ಯಾ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕುಟುಂಬದವರು ಭಾವನಾತ್ಮಕ ಹೇಳಿಕೆ ಹಂಚಿಕೊಂಡಿದ್ದಾರೆ. ಅನನ್ಯಾ ಅವರು ಅತ್ಯಂತ ಧೈರ್ಯಶಾಲಿ ಹಾಗೂ ಬಲವಾದ ಮನೋಭಾವ ಹೊಂದಿದ್ದ ವ್ಯಕ್ತಿಯಾಗಿದ್ದರು ಎಂದು ಕುಟುಂಬ ಸ್ಮರಿಸಿದೆ.

ಅವರ ಅಗಲಿಕೆಯ ನೋವಿನ ನಡುವೆ ಕುಟುಂಬವು ಅಭಿಮಾನಿಗಳು ಮತ್ತು ಮಾಧ್ಯಮದವರಲ್ಲಿ ಗೌಪ್ಯತೆ ಹಾಗೂ ವೈಯಕ್ತಿಕ ಸಮಯಕ್ಕೆ ಗೌರವ ನೀಡುವಂತೆ ಮನವಿ ಮಾಡಿದೆ.

ಅನನ್ಯಾ ರಾಜ್ ಅವರು ಹಿಂದಿ ಚಿತ್ರರಂಗದ ಜೊತೆಗೆ ಪ್ರಾದೇಶಿಕ ಸಿನಿಮಾಗಳಲ್ಲೂ ಕೆಲಸ ಮಾಡಿದ್ದರು. '7 Hours to Go' (2016), 'The Final Exit' (2017) ಹಾಗೂ 'Ghost' (2019) ಸಿನಿಮಾಗಳ ಮೂಲಕ ಅವರು ಗುರುತಿಸಿಕೊಂಡಿದ್ದರು. ತೆಲುಗಿನ 'Thaggede Le' (2022) ಸೇರಿದಂತೆ ಕೆಲವು ಪ್ರಾದೇಶಿಕ ಚಿತ್ರಗಳಲ್ಲಿಯೂ ನಟಿಸಿದ್ದರು.

ಅನನ್ಯಾ ರಾಜ್ ಅವರ ನಿಧನದ ಸುದ್ದಿ ಇದೀಗ ಚಿತ್ರರಂಗದಲ್ಲಿ ಸಂತಾಪದ ಅಲೆ ಮೂಡಿಸಿದ್ದು, 27ನೇ ವಯಸ್ಸಿನಲ್ಲೇ ಪ್ರತಿಭಾವಂತ ನಟಿಯನ್ನು ಕಳೆದುಕೊಂಡಿರುವುದು ಅಭಿಮಾನಿಗಳಿಗೆ ದುಃಖ ತಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddione