Dailyhunt Logo
  • Light mode
    Follow system
    Dark mode
    • Play Story
    • App Story
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮೇ 26ರಂದು ಉಚಿತ ಗ್ಯಾಸ್ಟ್ರೋ ಶಿಬಿರ

ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮೇ 26ರಂದು ಉಚಿತ ಗ್ಯಾಸ್ಟ್ರೋ ಶಿಬಿರ

ಚಿತ್ರದುರ್ಗ. ಮೇ.25: ಚಿತ್ರದುರ್ಗ ಜಿಲ್ಲಾಸ್ಪತ್ರೆ ಮತ್ತು ದಾವಣಗೆರೆ ಎಸ್.ಎಸ್. ನಾರಾಯಣ ಹೆಲ್ತ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಇದೇ ಮೇ 26ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲಾಸ್ಪತ್ರೆಯ ಕೊಠಡಿ ಸಂಖ್ಯೆ 15ರಲ್ಲಿ ಉಚಿತ ಗ್ಯಾಸ್ಟ್ರೋ ಶಿಬಿರ ಏರ್ಪಡಿಸಲಾಗಿದೆ.

ದಾವಣಗೆರೆ ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಯಕೃತ್ತು ವೈದ್ಯರಾದ ಡಿ.ಕೆ.ಅಶ್ವಿನ್ ಅವರು ಉಚಿತವಾಗಿ ಗ್ಯಾಸ್ಟ್ರೋ ಶಿಬಿರ ನಡೆಸುವರು.
ಹೊಟ್ಟೆನೋವು, ಹೊಟ್ಟೆ ಉಬ್ಬುವಿಕೆ, ಅಜೀರ್ಣ, ಎದೆಯುರಿ, ವಾಕರಿಕೆ, ವಾಂತಿ, ಮಲದಲ್ಲಿ ರಕ್ತ, ಗ್ಯಾಸ್, ವಾಯು, ಅಗಾಗ ತೇಗು ಬರುವುದು, ಮಲಬದ್ಧತೆ, ಅತಿಸಾರ ಬೇದಿ, ಹಸಿವಿನ ಕೊರತೆ, ನುಂಗಲು ತೊಂದರೆ, ತೀವ್ರವಾದ ಹೊಟ್ಟೆ ನೋವು, ವಾಂತಿಯಲ್ಲಿ ರಕ್ತ, ಹಠಾತ್ ತೂಕ ನಷ್ಟ, ಕಮಾಲೆ ಸೇರಿದಂತೆ ಈ ಗ್ಯಾಸ್ಟ್ರೋ ಲಕ್ಷಣಗಳು ಕಂಡುಬಂದರೆ ಸಾರ್ವಜನಿಕರು ಮತ್ತು ಪೋಷಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ 9535025743, 7259759982 ಗೆ ಸಂಪರ್ಕಿಸಬಹುದು ಎಂದು ಎಂದು ಸಿಎಂಸಿಆರ್‍ಐ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddione