Dailyhunt Logo
  • Light mode
    Follow system
    Dark mode
    • Play Story
    • App Story
ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಜನರ ಕುಂದು ಕೊರತೆಗಳಿಗೆ ತಕ್ಷಣದ ಸ್ಪಂದನೆ

ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಜನರ ಕುಂದು ಕೊರತೆಗಳಿಗೆ ತಕ್ಷಣದ ಸ್ಪಂದನೆ

ಚಿತ್ರದುರ್ಗ, ಏ.30: ಗ್ರಾಮೀಣ ಮಟ್ಟದ ಅಹವಾಲುಗಳನ್ನು ಆಲಿಸಲು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಆರಂಭಿಸಿರುವ 'ಗ್ರಾಮ-ಫೋನ್' ಉಚಿತ ಸಹಾಯವಾಣಿಯು ಸಾರ್ವಜನಿಕರಲ್ಲಿ ಭರವಸೆ ಮೂಡಿಸಿದೆ. 20 ನವೆಂಬರ್ 2025 ರಂದು ಪ್ರಾರಂಭವಾದ ಈ ಸೇವೆಯು ಇದುವರೆಗೂ ಜಿಲ್ಲೆಯ ಗ್ರಾಮೀಣ ಭಾಗದ ಸುಮಾರು 300 ದೂರುಗಳನ್ನು ಸ್ವೀಕರಿಸಿ, ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಜಿ.ಪಂ.ಸಿಇಓ ಡಾ.ಆಕಾಶ್ ತಿಳಿಸಿದ್ದಾರೆ.

ಸಹಾಯವಾಣಿಯ ಕಾರ್ಯವೈಖರಿ:
ಜಿಲ್ಲಾ ಪಂಚಾಯತ್ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಈ ಸಹಾಯವಾಣಿ 1800-425-1978ಕ್ಕೆ ಸಾರ್ವಜನಿಕರು ಕರೆ ಮಾಡಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. ಸ್ವೀಕೃತವಾದ ಪ್ರತಿಯೊಂದು ದೂರಿಗೂ ಸಂಬAಧಿಸಿದAತೆ ದೂರುದಾರರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸಲಾಗುತ್ತದೆ. ನಂತರ ಆಯಾ ಇಲಾಖೆಯ ಅಧಿಕಾರಿಗಳಿಗೆ ದೂರುಗಳನ್ನು ವರ್ಗಾಯಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

ಸಹಾಯವಾಣಿ ಪ್ರಾರಂಭವಾದಾಗಿನಿAದ ಮನರೇಗಾ 42, ಗ್ರಾಮೀಣ ಕುಡಿಯುವ ನೀರಿಗೆ 84, ನೈರ್ಮಲ್ಯ 39, ವಸತಿ 14, ಗ್ರಾಮ ಪಂಚಾಯಿತಿ ಆಡಳಿತ ಮತ್ತು ಸಿಬ್ಬಂದಿ ಕುರಿತು 36, ಇ-ಸ್ವತ್ತಿಗೆ 85 ಸೇರಿ ಒಟ್ಟು 300 ಕರೆಗಳು ಬಂದಿವೆ. ಇವುಗಳಿಗೆ ಸ್ಪಂದಿಸಿ ಕೂಡಲೆ ಪರಿಹಾರ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ವಿಶೇಷವಾಗಿ ‘ಕುಡಿಯುವ ನೀರಿನ’ ಪೂರೈಕೆಗೆ ಸಂಬAಧಿಸಿದAತೆ ಉದ್ಭವಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಈ ಸಹಾಯವಾಣಿ ಹೆಚ್ಚಿನ ಒತ್ತು ನೀಡಲಿದೆ. ಗ್ರಾಮೀಣ ಭಾಗದ ಜನರು ಯಾವುದೇ ಕುಂದುಕೊರತೆಗಳಿದ್ದಲ್ಲಿ ಈ ಉಚಿತ ಸಹಾಯವಾಣಿಯ ಸದುಪಯೋಗ ಪಡಿಸಿಕೊಳ್ಳುವಂತೆ ಜಿ.ಪಂ.ಸಿಇಓ ಡಾ.ಆಕಾಶ್ ಕೋರಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddione