ಆರೋಗ್ಯ
ದೇವರ ಕೋಣೆಯಲ್ಲಿ ಸಿಗುವ ವಿಭೂತಿಯಲ್ಲಿದೆ ತಲೆ ನೋವು ಗುಣವಾಗಿಸೋ ಶಕ್ತಿ

ವಿಭೂತಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರ ದೇವರ ಕೋಣೆಯಲ್ಲಿ ವಿಭೂತಿ ಗಟ್ಟಿ ಇರುತ್ತೆ. ಅದರಲ್ಲಿ ಎರಡು ವಿಧವಿದೆ. ಒಂದು ಉಂಡೆ ವಿಭೂತಿಯಾದ್ರೆ ಮತ್ತೊಂದು ನಾಮದ ವಿಭೂತಿ. ವಿಭೂತಿಯನ್ನ ನಾವೂ ಸಹಜವಾಗಿ ಹಣೆಗೆ ಇಡೋದಕ್ಕೆ ಬಳಸುತ್ತೇವೆ. ಅದು ದೇವರ ಮೇಲಿನ ಭಕ್ತಿಗೆ. ಆದರೆ ಈ ವಿಭೂತಿಯಲ್ಲೂ ಹಲವು ಔಷಧಿಯ ಗುಣಗಳಿರುವುದು ಯಾರಿಗೆ ತಾನೇ ಗೊತ್ತು..?
ಅಡುಗೆ ಮನೆಯಲ್ಲಿರುವ ಹಲವು ವಸ್ತುಗಳಿಂದಲೂ ಔಷಧಿ ದೊರಕುತ್ತೆ. ಅದರಂತೆ ದೇವರ ಮನೆಯಲ್ಲೂ ಮೆಡಿಸಲ್ ಫ್ಯಾಕ್ಟರಿ ಇದೆ ಅಂತ ಗೊತ್ತಾಗಿದೆಈ ವಿಭೂತಿಯಿಂದಲೇ. ಸಣ್ಣ ಪುಟ್ಟ ಕಾಯಿಲೆಗಳಿಗೆ ಈ ವಿಭೂತಿಯಿಂದಲೇ ಗುಣಪಡಿಸಿಕೊಳ್ಳಬಹುದು.
• ಮುಖದ ಸೌಂದರ್ಯಕ್ಕೂ ವಿಭೂತಿಯನ್ನು ಉಪಯೋಗಿಸಬಹುದು. ಸಾಮಾನ್ಯವಾಗಿ ಮುಖದಲ್ಲಿ ಕಲೆಗಳು ಉಳಿದುಕೊಂಡರೆ, ಅದನ್ನ ಹೋಗಲಾಡಿಸಿಕೊಳ್ಳೋದಕ್ಕೆ ನಾನಾ ಕಸರತ್ತುಗಳನ್ನಂತು ಮಾಡ್ತೇವೆ. ಆದ್ರೆ ಖುಷಿ ಪಡುವಷ್ಟು ಪ್ರಯೋಜನವಾಗಿರಲ್ಲ. ಮುಖದಲ್ಲಿ ಅಂತಹ ಕಲೆಗಳಿದ್ರೆ ನೀರಿನಲ್ಲಿ ವಿಭೂತಿ ಗಟ್ಟಿ ಕಲಸಿ, ಮುಖಕ್ಕೆ ಹಚ್ಚಿದ್ರೆ ಕಲೆಗಳು ಮಾಯಾವಾಗುತ್ತವೆ.
• ದೇಹ ಉಷ್ಣಾಂಶದಿಂದ ಕೂಡಿ, ಹಿಂಸೆಯಾಗುತ್ತಿದ್ರೆ ಹೀಗೆ ಮಾಡಿ. ಮಲಗುವ ಮುನ್ನ ಈ ವಿಭೂತಿಯನ್ನು ನೀರಿನಲ್ಲಿ ಕಲಸಿ ಕಣ್ಣಿನ ರೆಪ್ಪೆಗೆ ಹಚ್ಚಿ, ಸ್ವಲ್ಪ ಸಮಯ ಬಿಟ್ಟು ತೊಳೆದು ಮಲಗಿ. ಆರಾಮಾಗಿ ನಿದ್ದೆಯೂ ಬರುತ್ತೆ, ದೇಹದ ಉಷ್ಣಾಂಶ ಕಡಿಮೆಯೂ ಆಗುತ್ತೆ.
• ತಲೆ ನೋವಿದ್ದಾಗ ಇದನ್ನು ತೇಯ್ದು ಆ ಕಡೆ ಈ ಕಡೆ ತಲೆ ನೋವಿರು ಜಾಗಕ್ಕೆ ಹಚ್ಚಿದ್ರೆ ತಲೆನೋವು ವಾಸಿಯಾಗಿತ್ತದೆ.
• ಪುಟ್ಟ ಮಕ್ಕಳಿಗೆ ಜ್ವರ ಬಂದ್ರೆ ವಿಭೂತಿ ತೇಯ್ದು ಹಣೆಗೆ ಹಚ್ಚುವುರಿಂದ ಜ್ವರ ಕಡಿಮೆಯಾಗುತ್ತದೆ.
• ಒಂದು ವೇಳೆ ಹೊಟ್ಟೆ ನೋವಿದ್ದರು ವಿಭೂತಿ ಬಳಸಬಹುದು. ಹೊಟ್ಟೆಯ ನೋವಿನ ಭಾಗಕ್ಕೆ ವಿಭೂತಿ ತೇಯ್ದು ಹಚ್ಚುವುದರಿಂದ ಹೊಟ್ಟೆ ನೋವು ಶಮನವಾಗುತ್ತದೆ.