Dailyhunt
ಈ ತಿಂಗಳ ಕೊನೆಯಲ್ಲಿ ರಸ್ತೆಯ ಎಲ್ಲಾ ಗುಂಡಿಗಳನ್ನ ಮುಚ್ಚುತ್ತೇವೆ : ಸಚಿವ ಅಶೋಕ್

ಈ ತಿಂಗಳ ಕೊನೆಯಲ್ಲಿ ರಸ್ತೆಯ ಎಲ್ಲಾ ಗುಂಡಿಗಳನ್ನ ಮುಚ್ಚುತ್ತೇವೆ : ಸಚಿವ ಅಶೋಕ್

by suddionenews September 10, 2021, 2:25 PM 1.1k Views

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದಷ್ಟು ಸಮಸ್ಯೆಗಳು ಬಗೆ ಹರಿಯೋದೆ ಇಲ್ವೇನೊ ಅನ್ನೋ ರೀತಿ ಇದಾವೆ. ಇದೀಗ ಮಳೆ ಬಂದ ಕಾರಣ ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳೆಲ್ಲಾ ನೀರು ತುಂಬಿ ವಾಹನ ಸವಾರರು ಪರದಾಡುವಂತಾಗಿದೆ.

ರಸ್ತೆ ಗುಂಡಿಗಳ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾದ ಬಳಿಕ ಇದೀಗ ಸಚಿವರು ಗುಂಡಿ‌ ಮುಚ್ಚುವ ಭರವಸೆ ನೀಡಿದ್ದಾರೆ.

ಹೌದು, ಈ ಸಂಬಂಧ ಇಂದು ನಗರದಲ್ಲಿ ಮಾತನಾಡಿದ ಸಚಿವರು ಸೆಪ್ಟೆಂಬರ್ 30ರ ಒಳಗೆ ರಸ್ತೆ ಗುಂಡಿಗಳನ್ನ ಮುಚ್ಚಲಾಗುವುದು ಎಂದಿದ್ದಾರೆ. ಈಗಾಗಲೇ ಮಳೆಯಿಂದಾಗಿ ಗುಂಡಿ ಬಿದ್ದಿರುವ ರಸ್ತೆಗಳನ್ನ ಸರಿಪಡಿಸಲು ಸಚಿವ ಆರ್ ಅಶೋಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈಗಾಗಲೇ ನಗರದ ರಸ್ತೆ ಗುಂಡಿಗಳ ಸರ್ವೇ ನಡೆದಿದೆ. ಪದ್ಮನಾಭ ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ಈ ತಿಂಗಳ ಕೊನೆಯಲ್ಲಿ ಸಿಲಿಕಾನ್ ಸಿಟಿಯ ಎಲ್ಲಾ ರಸ್ತೆ ಗುಂಡಿಗಳನ್ನ ಮುಚ್ಚಲಾಗುತ್ತೆ. ಈ ಸಂದರ್ಭದಲ್ಲಿ ಏನಾದ್ರೂ ಕಳಪೆ ಕಾಮಗಾರಿ ನಡೆದ್ರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddione