Friday, 23 Apr, 11.30 am ಸುದ್ದಿಒನ್

ಪ್ರಮುಖ ಸುದ್ದಿ
ಈ ವಾರವೂ ಬಿಗ್ ಬಾಸ್ ವೀಕೆಂಡ್ ಶೋಗೆ ಕಿಚ್ಚ ಬರೋದಿಲ್ಲ..ಆರೋಗ್ಯದ ಬಗ್ಗೆ ಹೊಸ ಅಪ್ ಡೇಟ್ ಕೊಟ್ಟ ಸುದೀಪ್..!

ಅಭಿನಯ ಚಕ್ರವರ್ತಿ.ಬಿಗ್ ಬಾಸ್ ಸಾರಥಿ ಕಿಚ್ಚ ಸುದೀಪ್ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿರುವುದು ಗೊತ್ತಿರುವ ಸಂಗತಿಯೇ. ಹೀಗಾಗಿ ರೆಸ್ಟ್ ನಲ್ಲಿರುವ ಕಿಚ್ಚ ಶೀಘ್ರವೇ ಗುಣಮುಖರಾಗಲಿ ಎಂದು ಸುದೀಪ್ ಭಕ್ತಗಣ ಪೂಜೆ ಸಲ್ಲಿಸುತ್ತಿದ್ದಾರೆ. ಇತ್ತ ಕಿಚ್ಚನ ಆರೋಗ್ಯದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಬಿಗ್ ಬಾಸ್ ಸ್ಪರ್ಧಿಗಳು ಸುದೀಪ್ ಗೆ ಪತ್ರ ಬರೆದು ಪ್ರೀತಿಯಿಂದ ಕೈ ತುತ್ತು ಕಳುಹಿಸಿಕೊಟ್ಟಿದ್ದರು. ಇದೀಗ ಸುದೀಪ್ ತಮ್ಮ ಆರೋಗ್ಯದ ಬಗ್ಗೆ ಹೊಸ ಅಪ್ ಡೇಟ್ ಕೊಟ್ಟಿದ್ದಾರೆ.

ಈ ವಾರವೂ ಕಿಚ್ಚ ವೀಕೆಂಡ್ ಗೆ ಶೋಗೆ ಹಾಜರಾಗುತ್ತಿಲ್ಲ. ಅನಾರೋಗ್ಯದಿಂದ ಕಳೆದ ವಾರ ಕಿಚ್ಚ ಸುದೀಪ್ ವಾರಾತ್ಯಂದ ಸಂಚಿಕೆ ನಡೆಸಿ ಕೊಡಲು ಆಗಿರಲಿಲ್ಲ. ಹೀಗಾಗಿ ಈ ವಾರ ಸುದೀಪ್ ವೀಕೆಂಡ್ ಶೋಗೆ ಬರಲಿದ್ದಾರೆ ಎಂದು ಅಭಿಮಾನಿಗಳು ಎದುರು ನೋಡಿದ್ದರು. ಇದೀಗ ಅವರಿಗೆ ಭಾರೀ ನಿರಾಸೆಯಾಗಿದೆ. ಸುದೀಪ್ ಇನ್ನೂ ಕೆಲ ದಿನಗಳ ಕಾಲ ಚೇತರಿಸಿಕೊಂಡ ನಂತರ ಬಿಗ್ ಬಾಸ್ ವೇದಿಕೆಗೆ ಹಾಜರಾಗುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕಿಚ್ಚನ ಟ್ವೀಟ್ ನಲ್ಲಿ ಏನಿದೆ.?

'ಈ ವಾರದ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಗಂಟೆಗಟ್ಟಲೆ ವೇದಿಕೆಯಲ್ಲಿ ನಿಂತು, ಎಲ್ಲ ಸ್ಪರ್ಧಿಗಳಿಗೆ ನ್ಯಾಯ ಒದಗಿಸುವುದಕ್ಕೂ ಮುನ್ನ ನನಗೆ ಇನ್ನಷ್ಟು ವಿಶ್ರಾಂತಿ ಬೇಕಿದೆ. ಇದು ಒಂದು ಕಷ್ಟದ ನಿರ್ಧಾರ. ಶೂಟ್ ರದ್ದು ಮಾಡಿ ಪರಿಸ್ಥಿತಿಯನ್ನು ಸುಲಭವಾಗಿಸಿದ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ತಮಗಾಗಿ ಪ್ರಾರ್ಥಿಸುತ್ತಿರುವ ಎಲ್ಲರಿಗೂ ಅವರು ಧನ್ಯವಾದ ಎಂದಿದ್ದಾರೆ.

ಕಿಚ್ಚನ ಸುದೀಪ್ ಅನಾರೋಗ್ಯದ ಬಗ್ಗೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಕಳೆದ ವಾರ ಮಾಹಿತಿ ನೀಡಿದ್ದರು. ಹೀಗಾಗಿ ಮನೆ ಮಂದಿ ಸುದೀಪ್ ಆರೋಗ್ಯಕ್ಕಾಗಿ ಪ್ರಾರ್ಥಿಸಿಕೊಂಡಿದ್ದರು. ಅಲ್ಲದೇ ಪ್ರೀತಿಯಿಂದ ಅಡುಗೆ ಮಾಡಿ ಓಲವಿನ ಓಲೆ ಬರೆದು ಸುದೀಪ್ ಗೆ ಕಳುಹಿಸಿದ್ದರು. ಸುದೀಪ್ ಆ ಪತ್ರ ಓದಿ, ಬಿಗ್ ಮಂದಿ ಕೈ ರುಚಿ ಸವಿದು ಮನೆಯ ಸದಸ್ಯರಿಗೆ ಧನ್ಯವಾದ ತಿಳಿಸಿದ್ದರು. ಅಲ್ಲದೇ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಕೂಡ ಬಿಗ್ ಬಾಸ್ ಟೀಂ ಹಾಗೂ ಕಂಟೆಸ್ಟೆಂಟ್ ಗೆ ಧನ್ಯವಾದ ತಿಳಿಸಿದ್ದರು.
.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Suddione
Top