Sunday, 09 May, 8.00 pm ಸುದ್ದಿಒನ್

ಪ್ರಮುಖ ಸುದ್ದಿ
ಎತ್ತ ಸಾಗುತ್ತಿದೆ ಬಳ್ಳಾರಿ - ವಿಜಯನಗರ | ಏರುತ್ತಲೇ ಇದೆ ಸೋಂಕಿತರ ಸಂಖ್ಯೆ ; ಸಾರ್ವಜನಿಕರೇ ಈಗಲಾದರೂ ಎಚ್ಚೆತ್ತುಕೊಳ್ಳಿ !

ಸುದ್ದಿಒನ್, ಬಳ್ಳಾರಿ, (ಮೇ.09) : ಅವಳಿ ಜಿಲ್ಲೆಗಳಾದ ಬಳ್ಳಾರಿ- ವಿಜಯನಗರದ ಮೇಲೆ ಕರೋನ ಸುನಾಮಿಯಂತೆ ಬಂದಪ್ಪಳಿಸಿದ್ದು, ಜನರು ಜೀವ ಉಳಿಸಿಕೊಂಡರೆ ಸಾಕು ಎನ್ನುವ ಸ್ಥಿತಿ ತಲುಪಿದ್ದಾರೆ. ಎತ್ತ ಸಾಗುತ್ತಿದೆ ಬಳ್ಳಾರಿ - ವಿಜಯನಗರ. ದಿನದಿಂದ ದಿನಕ್ಕೆ ಏರುತ್ತಲೇ ಇದೆ ಸೋಂಕಿತರ ಸಂಖ್ಯೆ. ಸಾರ್ವಜನಿಕರೇ ಈಗಲಾದರೂ ಎಚ್ಚೆತ್ತುಕೊಳ್ಳಿ !

ಭಾನುವಾರದ ವರದಿಯಲ್ಲಿ ಬರೋಬ್ಬರಿ 2141 ಜನರಿಗೆ ಸೋಂಕು ದೃಢಪಟ್ಟಿದೆ. 507 ಜನ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 14359 ಸಕ್ರಿಯ ಪ್ರಕರಣಗಳಿವೆ.

ಭಾನುವಾರ 21 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ಈವರೆಗೆ ಸಾವಿನ ಸಂಖ್ಯೆ 908ಕ್ಕೆ ಏರಿಕೆಯಾಗಿದೆ.

ಬಳ್ಳಾರಿ 872,
ಸಂಡೂರು 310,
ಸಿರಗುಪ್ಪ 53,
ಕೂಡ್ಲಿಗಿ 120,
ಹಡಗಲಿ 105,
ಹೊಸಪೇಟೆ 509,
ಹಗರಿಬೊಮ್ಮನಹಳ್ಳಿ 153,
ಹರಪನಹಳ್ಳಿ 19 ಪ್ರಕರಣಗಳು ದೃಢಪಟ್ಟಿವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Suddione
Top