Dailyhunt Logo
  • Light mode
    Follow system
    Dark mode
    • Play Story
    • App Story
ಗಣಿಗಾರಿಕೆಗೆ ಸುದ್ದಿಯಾಗಿದ್ದ ಬೇಬಿ ಬೆಟ್ಟದಲ್ಲಿ ಸ್ಪೋಟಕ ಪತ್ತೆ..!

ಗಣಿಗಾರಿಕೆಗೆ ಸುದ್ದಿಯಾಗಿದ್ದ ಬೇಬಿ ಬೆಟ್ಟದಲ್ಲಿ ಸ್ಪೋಟಕ ಪತ್ತೆ..!

ಮಂಡ್ಯ: ಕಳೆದ ಕೆಲವು ದಿನಗಳಿಂದ ಬೇಬಿ ಬೆಟ್ಟ ಹೆಸರು ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.

ಗಣಿಗಾರಿಕೆ ವಿಚಾರದಲ್ಲೇ ಸದ್ದು ಮಾಡಿತ್ತು. ಇದೀಗ ಇದೇ ಬೇಬಿ ಬೆಟ್ಟದಲ್ಲಿ ಸ್ಪೋಟಕ ಪತ್ತೆಯಾಗಿದೆ.

ಪಾಂಡವಪುರ ತಾಲೂಕಿನ ನಿಷೇಧಿತ ಪ್ರದೇಶ ಸಿದ್ಧಲಿಂಗೇಶ್ವರ ಕ್ರಷರ್ ಬಳಿ ಈ ಸ್ಪೋಟಕಗಳು ಪತ್ತೆಯಾಗಿವೆ. ಈ ಸ್ಪೋಟಕಗಳ ಪತ್ತೆಯಿಂದಾಗಿ ಹಲವು ಅನುಮಾನಗಳಿಗೆ ಕಾರಣವಾಗಿದೆ. 11 ಡಿಟೋನೇಟರ್, 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಈಗಾಗಲೇ ಪಾಂಡವರಪುರ ಪೊಲೀಸರು ಇದನ್ನೆಲ್ಲಾ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬೆಟ್ಟದಲ್ಲಿ ಗಣಿಗಾರಿಕೆ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಬ್ಲಾಸ್ಟ್ ಮೂಲಕ ಗಣಿಗಾರಿಕೆ ಮಾಡಲಾಗುತ್ತಿದೆ ಎನ್ನಲಾಗ್ತಾ ಇತ್ತು. ಹಾಗೇ ಮಾಡ್ತಾ ಇಲ್ಲ ಅಂತ ಗಣಿಗಾರಿಕೆ ಮಾಲೀಕರು ಸ್ಪಷ್ಟಪಡಿಸಿದ್ದರು. ಆದ್ರೆ ಇದೀಗ ಸ್ಪೋಟಕ ವಸ್ತುಗಳು ಸಿಕ್ಕಿದ್ದು ಅನುಮಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಪದೇ ಪದೇ ಇಂಥವೇ ಘಟನೆಗಳು ಬೆಳಕಿಗೆ ಬರ್ತಾ ಇರೋ ಕಾರಣ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಸ್ಥಳೀಯರು ಮನವಿ ಮಾಡುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddione