Dailyhunt Logo
  • Light mode
    Follow system
    Dark mode
    • Play Story
    • App Story
ಕಾಂಗ್ರೆಸ್ ಉಪಾಧ್ಯಕ್ಷೆ ಬಸಮ್ಮ ತಿಪ್ಪೇಸ್ವಾಮಿ ಜನ್ಮದಿನ : ವೃದ್ದರಿಗೆ ಹಣ್ಣು ಹಾಗೂ ಬೆಡ್‍ಶಿಟ್‍ಗಳ ವಿತರಣೆ

ಕಾಂಗ್ರೆಸ್ ಉಪಾಧ್ಯಕ್ಷೆ ಬಸಮ್ಮ ತಿಪ್ಪೇಸ್ವಾಮಿ ಜನ್ಮದಿನ : ವೃದ್ದರಿಗೆ ಹಣ್ಣು ಹಾಗೂ ಬೆಡ್‍ಶಿಟ್‍ಗಳ ವಿತರಣೆ

ರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ. 05 : ಮಹಿಳಾ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಬಸಮ್ಮ ತಿಪ್ಪೇಸ್ವಾಮಿ ಕಬೀರಾನಂದಾಶ್ರಮದಲ್ಲಿರುವ ವೃದ್ದರಿಗೆ ಹಣ್ಣು ಹಾಗೂ ಬೆಡ್‍ಶಿಟ್‍ಗಳನ್ನು ನೀಡುವ ಮೂಲಕ ಭಾನುವಾರ ತಮ್ಮ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಸರಳವಾಗಿ ಆಚರಿಸಿಕೊಂಡರು.

ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಸಂಭ್ರಮಿಸುವುದರ ಬದಲು ಅನಾಥರು, ವೃದ್ದರಿಗೆ ಹಣ್ಣು, ಬೆಡ್‍ಶೀಟ್‍ಗಳನ್ನು ವಿತರಿಸಿದ್ದು, ಮನಸ್ಸಿಗೆ ಸಮಾಧಾನವೆನಿಸುತ್ತದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ನಗರಸಭೆ ಮಾಜಿ ಸದಸ್ಯ ಸಿ.ಟಿ.ರಾಜೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Suddione