ಬೆಂಗಳೂರು : ರಾಜ್ಯದಲ್ಲಿ ಬುಧವಾರ 1,440 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 8,87,667ಕ್ಕೆ ಏರಿಕೆಯಾಗಿದೆ.
ಇಂದು 983 ಮಂದಿ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ 24,150 ಸಕ್ರಿಯ ಪ್ರಕರಣಗಳಿವೆ. ಬುಧವಾರವೇ ಕೊರೊನಾಗೆ 19 ಮಂದಿ ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 11,808ಕ್ಕೆ ಏರಿಕೆಯಾಗಿದೆ.
ಸದ್ಯ ರಾಜ್ಯದಲ್ಲಿ 318 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.35 ಮತ್ತು ಮರಣ ಪ್ರಮಾಣ ಶೇ.1.11ರಷ್ಟಿದೆ.
ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,71,204ಕ್ಕೆ ಏರಿಕೆಯಾಗಿದ್ದು, 18,394 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ಬೆಂಗಳೂರು ನಗರದಲ್ಲಿ 4,156 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಬೆಂಗಳೂರು ಗ್ರಾಮಾಂತರ 36, ಬೆಂಗಳೂರು ನಗರ 712, ಬಾಗಲಕೋಟೆ 12, ಬಳ್ಳಾರಿ 20, ಬೆಳಗಾವಿ 22, ಬೀದರ್ 8, ಚಾಮರಾಜನಗರ 16, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 38, ಚಿತ್ರದುರ್ಗ 46, ದಕ್ಷಿಣ ಕನ್ನಡ 35, ದಾವಣಗೆರೆ 15, ಧಾರವಾಡ 26, ಗದಗ 9, ಹಾಸನ 42, ಹಾವೇರಿ 6, ಕಲಬುರಗಿ 26, ಕೊಡಗು 7, ಕೋಲಾರ 30, ಕೊಪ್ಪಳ 5, ಮಂಡ್ಯ 52, ಮೈಸೂರು 64, ರಾಯಚೂರು 25, ರಾಮನಗರ 2, ಶಿವಮೊಗ್ಗ 24, ತುಮಕೂರು 80, ಉಡುಪಿ 15, ಉತ್ತರ ಕನ್ನಡ 20, ವಿಜಯಪುರ 22 ಮತ್ತು ಯಾದಗಿರಿಯಲ್ಲಿ 10 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

