
ಮೊಬೈಲ್ ಉಪಯೋಗಿಸದವರೇ ಇಲ್ಲ. ಅದನ್ನ ತುಂಬಾ ಕೇರ್ ಫುಲ್ ಆಗಿ ನೋಡಿಕೊಳ್ಳುತ್ತಾರೆ. ಒಂದೊಂದ್ ಸಲ ಆ ಕೇರಿಂಗೂ ಮೀರಿ ಮೊಬೈಲ್ ಕೈಜಾರಿ ಬಿದ್ದಿರುತ್ತೆ. ಆಗ ಆಗುವ ನೋವು ಅಷ್ಟಿಷ್ಟಲ್ಲ. ಇನ್ನು ಮೊಬೈಲ್ ಗಳು ನೀರಲ್ಲಿ ಬಿದ್ರೆ ಮುಗೀತು, ಹಾಳಾದಂತೆ. ಆದ್ರೆ ಇಲ್ಲೊಬ್ಬನ ಮೊಬೈಲ್ ಕೆರೆಯಲ್ಲಿ ಬಿದ್ರು ಕೂಡ ಆಯಕ್ಟೀವ್ ಆಗಿನೇ ಸಿಕ್ಕಿದೆಯಂತೆ.
ನೀರಲ್ಲಿ ಬಿದ್ರೆ ಹಾಳಾಗುವ ಮೊಬೈಲ್ ಕೆರೆಯಲ್ಲಿ ಬಿದ್ದರು ಸಿಕ್ಕಿದೆ ಅಂದ್ರೆ ಅವನೆಷ್ಟು ಅದೃಷ್ಟವಂತನಿರಬೇಕು. ಅದು ವರ್ಷವಾದ ಮೇಲೆ ಈ ಘಟನೆ ನಡೆದಿದೆ.
ಹೌದು, ತೈವಾನ್ ನ ಚನ್ ಎಂಬಾತ ಕಳೆದ ವರ್ಷ ಕೆರೆ ಬಳಿ ಹೋದಾಗ ಕೈ ಜಾರಿ ಮೊಬೈಲ್ ನೀರಿಗೆ ಬಿದ್ದಿದ್ದಂತೆ. ಕೆರೆಗೆ ಬಿದ್ದ ಮೊಬೈಲ್ ಹುಡುಕುವುದಾದರೂ ಹೇಗೆ ಅಂತ ಆತ ಸುಮ್ಮನೆ ಆಗಿದ್ದನಂತೆ. ಸಿಗದ ಕಾರಣ ಆ ಮೊಬೈಲ್ ಆಸೆಯನ್ನೇ ಬಿಟ್ಟಿದ್ದನಂತೆ.
ಇದೀಗ ಬೇಸಿಗೆಯ ಕಾಲ ಬೇರೆ. ತೈವಾನ್ ನಲ್ಲಿ ಅರ್ಧಶತಮಾನಕ್ಕೂ ಹೆಚ್ಚುಗಾಲ ಕೆರೆಗಳು ಬತ್ತಿ ಹೋಗಿರುತ್ತವೆ.
ಸದ್ಯ ಕೆರೆಗಳಲ್ಲಿ ಹೇಳಿಕೊಳ್ಳುವಷ್ಟು ನೀರಿಲ್ಲ. ಬತ್ತಿ ಹೋದ ಕೆರೆಯ ಬಳಿ ಹೋಗಿದ್ದ ಚೆನ್ ಗೆ ಶಾಕ್ ಆಗಿದೆ. ಕೆಸರಿರುವ ಜಾಗದಲ್ಲಿ ತನ್ನ ಮೊಬೈಲ್ ಕಂಡಿದೆ. ಕವರ್ ನೋಡಿ ಇದೆ ನಂದೆ ಮೊಬೈಲ್ ಅಂದುಕೊಂಡಿದ್ದಾನೆ. ಹತ್ತಿರ ಹೋಗಿ ನೋಡಿದ್ರೆ ಆ ಮೊಬೈಲ್ ಚೆನ್ ದೇ ಆಗಿದೆ. ಅಷ್ಟೇ ಅಲ್ಲ ವರ್ಷದ ಬಳಿಕವೂ ಆ ಮೊಬೈಲ್ ಆಯಕ್ಟೀವ್ ಆಗಿಯೇ ಇದೆ.