ಲಂಕೆ ಎಂದಾಕ್ಷಣ ಹತ್ತು ತಲೆಯ ರಾವಣ ಇರೋ ಪ್ಲೇಸ್ ನೆನಪಿಗೆ ಬರುತ್ತೆ.
ಲೂಸ್ ಮಾದ ಯೋಗಿಕನ್ನಡದಲ್ಲಿ ತನ್ನದೇ ಆದ ಚಾರ್ಮ್ ಮೂಡಿಸಿರುವವರು. ಯಾವುದೇ ಪಾತ್ರ ಕೊಟ್ಟರು ಆ ಪಾತ್ರದಲ್ಲಿ ಲೀಲಾಜಾಲವಾಗಿ ಅಭಿನಯಿಸಿ ನಟನೆಯನ್ನ ತೋರಿಸ್ತಾ ಇದ್ದವರು. ಇದೀಗ ಲಂಕೆಗೆ ರಾಮನಾಗಿ ಹೋಗ್ತಾ ಇದ್ದಾರೆ. ಅಭಿಮಾನಿಗಳು ಫುಲ್ ಕ್ಯೂರಿಯಾಸಿಟಿ ಬಂದ್ಬಿಟ್ಟಿದೆ ಸಿನಿಮಾ ಮೇಲೆ.
ಯಾಕಂದ್ರೆ ಇದು ಕೂಡ ರಾಮಾಯಣ ಆಧಾರಿತ ಸಿನಿಮಾನೇ ಆಗಿದೆ. ಹಾಗಾದ್ರೆ ಲಂಕೆಯಲ್ಲಿ ರಾಮನೇನು ಮಾಡ್ತಾನೆ ಅನ್ನೋದೆ ನೋಡುಗರ ಪ್ರಶ್ನೆ ಅದ್ಕೆಲ್ಲ ಉತ್ತರ ಸಿನಿಮಾದಲ್ಲಿದೆ ಅನ್ನೋದು ಚಿತ್ರತಂಡದ ಉತ್ತರ. ಇದೆಲ್ಲಾ ಬಿಡಿ ಸದ್ಯದ ವಿಚಾರ ಏನಪ್ಪ ಅಂದ್ರೆ, ಲಂಕೆ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.
ಲಂಕೆ ಎಂದಾಕ್ಷಣಾ ರಾಮಾಯಣದ ಕಲ್ಪನೆಯಲ್ಲಿ ರಾಮನ ಅವತಾರದಲ್ಲಿ ಲೂಸ್ ಮಾದ ಯೋಗಿ ಅವರನ್ನ ಊಹೆ ಮಾಡಿಕೊಂಡಿದ್ದವರಿಗೆ ಒಂದು ಕ್ಷಣ ಕನ್ಫ್ಯೂಷನ್ ಆಗಿದೆ. ಯಾವ ರೀತಿಯ ರಾಮಾಯಣ ಅಂತ. ಚಿತ್ರತಂಡ ಕುಇಡ ಈಗಾಗಲೇ ಹೇಳಿದೆ ಇದು ಮಾಡರ್ನ್ ರಾಮಾಯಣ ಅಂತ. ಮೋಷನ್ ಪೋಸ್ಟರ್ ನಲ್ಲೇ ಆ ಆಕ್ರೋಶದ ಕಿಡಿ ಹೊತ್ತಿ ಉರಿಯುತ್ತಾ ಇದೆ. ಯಾವುದೋ ಬೇಟೆಗೆ ಯೋಗಿ ಸ್ಕೆಚ್ ಹಾಕ್ತಿರೋದು ಗೊತ್ತಾಗ್ತಾ ಇದೆ.
ಈ ಸಿನಿಮಾದಲ್ಲಿ ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ್ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.
ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಅವರು ನಿರ್ಮಿಸಿರುವ ಈ ಚಿತ್ರ ಲಾಕ್ ಡೌನ್ ಮುಗಿದು, ಚಿತ್ರಮಂದಿರ ಆರಂಭಕ್ಕೆ ಅನುಮತಿ ದೊರಕಿದ ಮೇಲೆ ತೆರೆಗೆ ಬರಲಿದೆ.
ಇನ್ನು ಯೋಗಿ ರಾಮನಾದರೆ, ಕಾವ್ಯಾ ಶೆಟ್ಟಿ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಕಥೆಗೊಂದು ಟ್ವಿಸ್ಟ್.ಇನ್ನು ಸಂಚಾರಿ ವಿಜಯ್ ಕೂಡ ಸಿನಿಮಾದಲ್ಲಿದ್ದು, ಕೃಷಿ ತಾಂಪಂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

