Dailyhunt Logo
  • Light mode
    Follow system
    Dark mode
    • Play Story
    • App Story
ಮಹಾತ್ಮಾ ಜ್ಯೋತಿಬಾ ಫುಲೆ ಅವರ ಜನ್ಮ ದ್ವಿ ಶತಮಾನೋತ್ಸವ: ಮಕ್ಕಳ ಬೇಸಿಗೆ ಶಿಬಿರ

ಮಹಾತ್ಮಾ ಜ್ಯೋತಿಬಾ ಫುಲೆ ಅವರ ಜನ್ಮ ದ್ವಿ ಶತಮಾನೋತ್ಸವ: ಮಕ್ಕಳ ಬೇಸಿಗೆ ಶಿಬಿರ

ಸುದ್ದಿಒನ್, ಚಿತ್ರದುರ್ಗ, ಮೇ. 28 : ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ವತಿಯಿಂದ ಮುತ್ತಯ್ಯನಹಟ್ಟಿ ಹಾಗೂ ಗಂಜಿಗಟ್ಟೆ ಹಳ್ಳಿಗಳಲ್ಲಿ ಮಕ್ಕಳಲ್ಲಿ ಶಿಕ್ಷಣ - ಸಂಸ್ಕೃತಿ - ಮಾನವಿಯತೆ ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರವನ್ನು ಉದ್ದೇಶಿಸಿ ಎಐಡಿಎಸ್‌ಓ ರಾಜ್ಯ ಕಛೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರು ಅವರು ಮಾತನಾಡುತ್ತಾ ಈ ದೇಶದ ಶೋಷಿತರು, ಹೆಣ್ಣು ಮಕ್ಕಳು ಮತ್ತು ಎಲ್ಲಾ ವರ್ಗದ ಜನಗಳ ಶಿಕ್ಷಣಕ್ಕಾಗಿ ಹೋರಾಡಿದ ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಅವರು ಅಂದು ಜಡ್ಡು ಗಟ್ಟಿದ ಹಳೇ ಗೊಡ್ಡು ಸಂಪ್ರದಾಯದ ವಿರುದ್ಧ ಹೋರಾಡಿದ ಮಹಾನ್ ಚೇತನರು.

ದ್ವಿ ಶತಮಾನದ ಹಿಂದೆ ಶಿಕ್ಷಣ ಅಂದರೆ ಮೇಲು ಜಾತಿಯ ಕೆಲವು ಪುರುಷರ ಸ್ವತ್ತಾಗಿತ್ತು. ಅಂತಹ ಸಂದರ್ಭದಲ್ಲಿ ಶಿಕ್ಷಣದ ಕ್ರಾಂತಿ ಆರಂಭಿಸಿದ್ದು ಮಹಾತ್ಮಾ ಜ್ಯೋತಿಬಾ ಫುಲೆ. ಅವರು ಶಿಕ್ಷಣ ಪಡೆದುಕೊಂಡು ಅವರ ಮೊದಲ ಶಿಷ್ಯರು ಅಂದರೆ ‘ಸಾವಿತ್ರಿ ಬಾಯಿ ಫುಲೆ’. ಇಬ್ಬರು ದಂಪತಿಗಳು ಸೇರಿ ಶಿಕ್ಷಣ ಇದ್ದರೆ ಇಡೀ ಸಮಾಜ ಮುಂದುವರೆಯಲು ಸಾಧ್ಯ ಎಂದು ಪುಣೆಯಲ್ಲಿ ಮೊದಲ ಶಾಲೆ ಆರಂಭವಾಗಿತ್ತು. ಆದರೆ ಇದನ್ನು ಸಹಿಸದೆ ಕೆಲ ಸಾಂಪ್ರದಾಯಿಗಳು ಇವರಿಗೆ ಸಾಕಷ್ಟು ತೊಂದರೆಗಳು ಕೊಟ್ಟರು. ಹಾಗೆ ಸಾವಿತ್ರಿ ಬಾಯಿ ಫುಲೆ ಹೆಣ್ಣು ಮಕ್ಕಳು ಶಾಲೆ ಆರಂಭಿಸಿದಾಗ ಸಗಣಿ ನೀರು ಎರಚಿದರು, ಕಲ್ಲಿನಿಂದ ಹೊಡೆದು ಅವಮಾನಿಸಿ, ಅವರನ್ನು ಸಾಯಿಸುವ ಯತ್ನಗಳ ಕೂಡ ನಡೆಸಿದ್ದರು. ಇಷ್ಟೆಲ್ಲಾ ಸಂಕಷ್ಟಗಳನ್ನು ಎದುರಿಸಿ ನಮ್ಮ ದೇಶದ ಶಿಕ್ಷಣಕ್ಕಾಗಿ ಹೋರಾಡಿ, ನಿಮಗೆಲ್ಲರಿಗೂ ಉಚಿತ ಶಿಕ್ಷಣದ ಆಶಯವನ್ನು ತಂದುಕೊಟ್ಟರು.

ಇವತ್ತಿನ ಮಕ್ಕಳನ್ನು ದಾರಿತಪ್ಪಿಸುವ ಕೆಟ್ಟ ವಾತಾವರಣ ನಿರ್ಮಾಣವಾಗಿದೆ, ಇದರಿಂದ ದೂರವಿದ್ದು, ಸಮಾಜದಲ್ಲಿ ಒಳ್ಳೆಯ ವಿದ್ಯಾರ್ಥಿಗಳು ಆಗಬೇಕು. “ಎಲ್ಲಾ ಮಕ್ಕಳು ಕೂಡ ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಅವರ ಜೀವನ ಚರಿತ್ರೆಯನ್ನು ಅರ್ಥೈಸಿಕೊಂಡು ಜೀವನದಲ್ಲಿ ನೀವು ಕೂಡ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು” ಎಂದು ಮಕ್ಕಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಸಂಚಾಲಕ ಕೆ ಈರಣ್ಣ ಮತ್ತು ವಿದ್ಯಾರ್ಥಿಗಳು ಅಕ್ಷತಾ, ವಿದ್ಯಾಶ್ರೀ ಇತರರು ಭಾಗವಹಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Suddione