by suddionenews September 11, 2021, 2:22 PM 1k Views
ಮುಂಬೈ: ಪ್ರತಿ ವರ್ಷಗಣೇಶನ ಹಬ್ಬವನ್ನ ಮುಂಬೈ ಬೆಡಗಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು.
ಈಗಾಗ್ಲೇ ಒಂದಷ್ಟು ನೋವನ್ನ ಮರೆತು ಶಿಲ್ಪಾ ಶೆಟ್ಟಿ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಪಡುವಷ್ಟು ಪ್ರಯತ್ನ ಪಟ್ರು ಸಾಧ್ಯವಾಗದೆ ಇದ್ದಾಗ ಸುಮ್ಮನಾಗಿ ಬಿಟ್ಟಿದ್ದಾರೆ. ಇದೀಗ ಪತಿಯಿಲ್ಲದೆ ಇದ್ದರು ಮಕ್ಕಳೊಂದಿಗೆ ಅಷ್ಟೇ ಖುಷಿ ಖುಷಿಯಾಗಿ, ಉತ್ಸಾಹದಲ್ಲಿ ಗಣಪತಿ ಹಬ್ಬವನ್ನ ಆಚರಿಸಿದ್ದಾರೆ.
https://www.instagram.com/p/CTpZTlijPVe/?utm_medium=copy_link
ಮನೆಯಲ್ಲಿ ಗಣೇಶನನ್ನು ಕೂರಿಸಿದ್ದು, ಮಗ ವಿಹಾನ್ ಹಾಗೂ ಪುತ್ರಿ ಸಮೀಶಾ ಜೊತೆಗೆ ವಿಶೇಷ ಪೂಜೆ ಮಾಡಿದ್ದಾರೆ. ಜೊತೆಗೆ ಕ್ಯಾನೆರಾಗೆ ಪೋಸ್ ಕೊಟ್ಟಿದ್ದು, ಫೋಟೋ, ವಿಡಿಯೋಗಳನ್ನ ಶಿಲ್ಪಾ ಶೆಟ್ಟಿ ಶೇರ್ ಮಾಡಿಕೊಂಡಿದ್ದಾರೆ.
ನೀಲಿ ಚಿತ್ರಗಳ ತಯಾರಿಕೆ ಆರೋಪದಲ್ಲಿ ಮುಂಬೈ ಬೆಡಗಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೈಲು ಪಾಗಿದ್ದಾರೆ. ರಾಜ್ ಕುಂದ್ರಾ ಬಿಡಿಸಿಕೊಂಡು ಬರಲು ಜಾಮೀನಿಗಾಗಿ ಸಾಕಷ್ಟು ಪರದಾಡಿದ್ರು ಪ್ರಯೋಜನವಾಗಿಲ್ಲ. ಹೀಗಾಗಿ ಶಿಲ್ಪಾ ಶೆಟ್ಟಿ ಮಕ್ಕಳು, ಕೆಲಸ ಅಂತ ಗಮನವನ್ನೆಲ್ಲಾ ಆ ಕಡೆ ಕೊಡ್ತಾ ಇದ್ದಾರೆ.

