ಪ್ರಮುಖ ಸುದ್ದಿ
ನಿವಾರ್ ಚಂಡಮಾರುತ ಎಫೆಕ್ಟ್: ಬೆಳಗ್ಗೆಯಿಂದ ಸಿಲಿಕಾನ್ ಸಿಟಿಯಲ್ಲಿ ಬಿಡದ ಮಳೆ.!

ಬೆಂಗಳೂರು: ನಿವಾರ್ ಚಂಡಮಾರುತದ ಎಫೆಕ್ಟ್ ಬೆಂಗಳೂರಿಗು ತಟ್ಟಿದ್ದು ಬೆಳಗ್ಗೆಯಿಂದ ಒಂದೇ ಸಮನೆ ಮಳೆ ಸುರಿಯುತ್ತಿದೆ. ತುಂತುರು ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ ವಾಗಿದೆ.
ಯಶವಂತಪುರ, ಮಲ್ಲೇಶ್ವರಂ, ಮತ್ತಿಕೆರೆ, ಸೇರಿದಂತೆ ಎಲ್ಲೆಡೆ ಮಳೆ ಇದೆ. ಹಾಗೇ ಬೆಂಗಳೂರು ಹೊರವಲಯ ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಅತ್ತಿಬೆಲೆ ಸೇರಿದಂತೆ ಹಲವೆಡೆ ನಿನ್ನೇ ರಾತ್ರಿಯಿಂದ ಒಂದೇ ಸಮನೆ ಜಿಟಿಜಿಟಿ ಮಳೆಯ ಜೊತೆಗೆ ಸಂಪೂರ್ಣ ಮೋಡ ಕವಿದ ವಾತಾವರಣವಿದ್ದು ಮಳೆಯಿಂದಾಗಿ ಜನ ಮನೆಯಿಂದ ಹೊರ ಬರಲು ಸಹ ಸಾಧ್ಯವಾಗದೆ ಪರದಾಟ ನಡೆಸುವಂತಾಯಿತು.
ಕೆಲಸಕ್ಕೆ ಹೋಗುವ ಜನರು ಛತ್ರಿಯನ್ನು ಹಿಡಿದು ದ್ವಿಚಕ್ರ ವಾಹನದಲ್ಲಿ ಹಾಗೂ ರಸ್ತೆಯಲ್ಲಿ ಸಾಗುತ್ತಿರುವ ದೃಶ್ಯ ಕಂಡು ಬಂದಿದೆ.
ಇನ್ನೂ ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ವಾಹನ ದಟ್ಟಣೆಯಿಂದ ಕೂಡಿರುತ್ತಿತ್ತು, ಆದ್ರೆ ನಿರಂತರವಾಗಿ ತುಂತುರು ಮಳೆ ಹಾಗೂ ಮೋಡ ಕವಿದ ವಾತಾವರಣವಿದ್ದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ವಿರಳವಾಗಿ ಕಂಡು ಬಂದಿದ್ದು, ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಹೈರಾಣಾಗುವಂತಾಯಿತು.
ಸಂಜೆ ಆದರೂ ಕೂಡ ಮಳೆ ನಿಲ್ಲುವ ಯಾವ ಲಕ್ಷಣವೂ ಕಾಣುತ್ತಿಲ್ಲ.