Dailyhunt Logo
  • Light mode
    Follow system
    Dark mode
    • Play Story
    • App Story
ಪತ್ರಕರ್ತ ಸುರೇಶ್ ಬೆಳಗೆರೆ ಅವರಿಗೆ 'ಗಂಗಾ ಕೃಷ್ಣಾ ಸೇವಾ ಮಾಣಿಕ್ಯ' ರಾಜ್ಯ ಪ್ರಶಸ್ತಿ ಗೌರವ

ಪತ್ರಕರ್ತ ಸುರೇಶ್ ಬೆಳಗೆರೆ ಅವರಿಗೆ 'ಗಂಗಾ ಕೃಷ್ಣಾ ಸೇವಾ ಮಾಣಿಕ್ಯ' ರಾಜ್ಯ ಪ್ರಶಸ್ತಿ ಗೌರವ

ಸುದ್ದಿಒನ್, ಚಳ್ಳಕೆರೆ, ಜುಲೈ. 07 : ಮಾಧ್ಯಮ ಕ್ಷೇತ್ರದಲ್ಲಿ ಸುದೀರ್ಘ ಹಾಗೂ ಗಣನೀಯ ಸೇವೆ ಸಲ್ಲಿಸುತ್ತಿರುವ ಪತ್ರಕರ್ತ ಸುರೇಶ್ ಬೆಳಗೆರೆ ಅವರು ಈ ಸಾಲಿನ ಪ್ರತಿಷ್ಠಿತ ಗಂಗಾ ಕೃಷ್ಣಾ ಸೇವಾ ಮಾಣಿಕ್ಯ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹೊಸದುರ್ಗದ ಗಂಗಾ ಕೃಷ್ಣಾ ಶಿಕ್ಷಣ ಸಂಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಶ್ರೀರಾಮಪುರದ ಸಾಮಾಜಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ 'ಸ್ತ್ರೀ ಸಂಪದ' ಕನ್ನಡ ಮಾಸಪತ್ರಿಕೆಯ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಜುಲೈ 7ರ ಮಂಗಳವಾರದಂದು ನಡೆಯಲಿರುವ ಈ ಭವ್ಯ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.

ಈ ವಿಶೇಷ ಸಮಾರಂಭವು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮದೊಂದಿಗೆ 'ಸ್ತ್ರೀ ಸಂಪದ' ಮಾಸಿಕ ಕನ್ನಡ ಪತ್ರಿಕೆಯ ವಾರ್ಷಿಕೋತ್ಸವದ ಸಂಭ್ರಮವನ್ನೂ ಒಳಗೊಂಡಿದೆ. ಇದೇ ವೇದಿಕೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ವೃಕ್ಷಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥ ಹಾಗೂ ಡಿ.ಫಾರೆಸ್ಟ್ ಎಂ. ಕೃಷ್ಣಮೂರ್ತಿ ಅವರ ನೆನಪಿನಲ್ಲಿ ಪರಿಸರ ಸಂರಕ್ಷಣೆಯ ಸಾಧಕರಿಗೆ ರಾಜ್ಯ ಮಟ್ಟದ 'ಕೃಷ್ಣ ವನಶ್ರೀ ವೃಕ್ಷ ಪುತ್ರ' ರಾಜ್ಯ ಪ್ರಶಸ್ತಿಯನ್ನು ಸಹ ವಿತರಿಸಲಾಗುತ್ತಿದೆ. ಇದರೊಂದಿಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ 'ಗಂಗಾ ಕೃಷ್ಣ ಸೇವಾ ಮಾಣಿಕ್ಯ' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಸಿಎಸ್ ಆರ್ ನಿಧಿ ಯೋಜನೆಯಡಿ ಉಚಿತ ಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಕಲಿಕಾ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವೂ ಜರುಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddione