Dailyhunt Logo
  • Light mode
    Follow system
    Dark mode
    • Play Story
    • App Story
ರಾಹುಲ್ ಗಾಂಧಿ ದ್ವಿಪೌರತ್ವ ಗುಟ್ಟು ರಟ್ಟಾಗುವ ಭೀತಿಯಿಂದ ಕಾಂಗ್ರೆಸ್‌ನಿಂದ ಎಸ್‌ಐಆರ್ ವಿರೋಧ: ಸಂಸದ ಗೋವಿಂದ ಕಾರಜೋಳ

ರಾಹುಲ್ ಗಾಂಧಿ ದ್ವಿಪೌರತ್ವ ಗುಟ್ಟು ರಟ್ಟಾಗುವ ಭೀತಿಯಿಂದ ಕಾಂಗ್ರೆಸ್‌ನಿಂದ ಎಸ್‌ಐಆರ್ ವಿರೋಧ: ಸಂಸದ ಗೋವಿಂದ ಕಾರಜೋಳ

ಚಿತ್ರದುರ್ಗ ಜು. 07 :ಎಸ್.ಐ.ಆರ್‍ನಿಂದ ಕಾಂಗ್ರೆಸ್‍ನವರು ಭಯಭೀತರಾಗಿದ್ದಾರೆ.ಏಕೆಂದರೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಎರಡು ರಾಷ್ಟ್ರದ ದ್ವಿಪೌರತ್ವ ಪಡೆದಿದ್ದಾರೆ.ಕಾಂಗ್ರೆಸ್‍ಗೆ ರಾಹುಲ್ ಗಾಂಧಿಯವರ ಗುಟ್ಟು ರಟ್ಟಾಗುವ ಭೀತಿಯಿದೆ.ಆ ಗುಟ್ಟು ರಟ್ಟಾದರೆ ರಾಹುಲ್ ಗಾಂಧಿಯವರಿಗೆ ಸಂಸತ್ ಸದಸ್ಯತ್ವ ರದ್ದಾಗುವ ಭೀತಿಯಿದೆ.ಅದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದವರು ಎಸ್.ಐ.ಆರ್ ವಿರೋಧ ಮಾಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.

ಎಂದು ಸಂಸದರಾದ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ವಿರುದ್ದ ಕಿಡಿ ಕಾರಿದ್ದಾರೆ.

ಚಿತ್ರದುರ್ಗದಲ್ಲಿ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 1994 ರಿಂದಲೂ ರಾಹುಲ್ ಗಾಂಧಿಯವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ.ಎಸ್.ಐ.ಆರ್‍ನಿಂದ ಬಡವರು, ದಲಿತರು ಯಾರೂ ಸಹ ಮತದಾನ ಹಕ್ಕನ್ನು ಕಳೆದುಕೊಳ್ಳಲ್ಲ.ದ್ರೋಹಿ ದೇಶದಿಂದ ಬಂದ ಕೆಲವರು ಅಕ್ರಮವಾಗಿ ನಮ್ಮಲ್ಲಿ ನೆಲೆಸಿದ್ದಾರೆ. ಇದರಿಂದ ದೇಶದ ಆಂತರಿಕ ಭದ್ರತೆಗೆ ದಕ್ಕೆ ಆಗುವ ಸಾಧ್ಯತೆ ಇರುತ್ತದೆ. ಆ ಕಾರಣಕ್ಕಾಗಿ ಮನೆಮನೆಗೆ ಹೋಗಿ ಎಸ್.ಐ.ಆರ್ ಮಾಡಬೇಕಿದೆ. ಆದರೆ ಕಾಂಗ್ರೆಸ್ ನವರು ಮಸೀದಿ, ಮದರಸಾ, ಮಂದಿರಗಳಲ್ಲಿ ಎಸ್.ಐ.ಆರ್ ಮಾಡುತ್ತಿದ್ದಾರೆ ಹೀಗೆ ಮಾಡುವುದು ತಪ್ಪು.ಕಾಂಗ್ರೆಸ್ ನವರಿಗೆ ಪಾರದರ್ಶಕತೆ ಬೇಡವಾಗಿದೆ… ಅಕ್ರಮ ಎಸಗಿ ಜನ ನಂಬಿಕೆ ಕಳೆದುಕೊಳ್ಳುವ ರೀತಿ ಕಾಂಗ್ರೆಸ್ ವರ್ತನೆಯಾಗಿದೆ.ನಿನ್ನೆ ಚುನಾವಣೆ ಆಯೋಗಕ್ಕೆ ನಾವು ದೂರು ಸಲ್ಲಿಸಿದ್ದೇವೆ. ಸರಿಯಾದ ರೀತಿಯಲ್ಲಿ ಎಸ್.ಐ. ಆರ್ ನಡೆಸಿ ಎಂದು ಮನವಿ ಮಾಡಲಾಗಿದೆ ನಮ್ಮ ದೇಶದಲ್ಲಿ ಬಾಂಗ್ಲಾ, ಪಾಕಿಸ್ತಾನದ ಕೆಲ ವಲಸಿಗರಿದ್ದಾರೆ. ಅವರನ್ನು ದೇಶದ ಪ್ರಜೆಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ.ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೆಂಬ ಕಾರಣಕ್ಕೆ ಹುನ್ನಾರ ನಡೆದಿದೆ.ಮತಬ್ಯಾಂಕ್‍ಗಾಗಿ ಕಾಂಗ್ರೆಸ್ ನಿಂದ ದೇಶದ ಭದ್ರತೆಗೆ ಧಕ್ಕೆಯಾಗುತ್ತಿದೆ.ಎಂದರು.

ರಾಜ್ಯದಲ್ಲಿ ಬರ ಆವರಿಸಿದೆ. ನಮ್ಮ ಜಿಲ್ಲೆಯಲ್ಲಿ ಉಪ ಮುಖ್ಯಮಂತ್ರಿಗಳು ಇತ್ತೀಚೆಗೆ ಸಭೆ ನಡೆಸಿ ಹೋಗಿದ್ದಾರೆ.ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ.. ಬಿತ್ತನೆ ಕೂಡ ಕುಂಟಿತಗೊಂಡಿದೆ… ಕುಡಿಯುವ ನೀರಿನ ಸಮಸ್ಯೆ ಕೆಲವು ಕಡೆ ಆಗುತ್ತಿದೆ.ಹಾಗೆಯೇ ಮೇವಿನ ಸಮಸ್ಯೆ ಆಗಿದೆ.. ಗೋಶಾಲೆಗಳನ್ನು ತೆರೆಯಬೇಕು ಹಾಗೂ ಖಾಸಗೀ ಗೋಶಾಲೆಗಳಿಗೆ ಸಮರ್ಪಕ ಮೇವು ಹಾಗೂ ಆರ್ಥಿಕ ಸೌಲಭ್ಯವನ್ನು ಸರ್ಕಾರ ಒದಗಿಸಬೇಕೆಂದು ಆಗ್ರಹಿಸುತ್ತೇನೆ ಸರ್ಕಾರವೇ ರೈತರ ಪರವಾಗಿ ಬೆಳೆ ವಿಮೆ ಪಾವತಿ ಮಾಡಿ ರೈತರ ನೆರವಿಗೆ ನಿಲ್ಲಬೇಕು.ಕೇಂದ್ರದ ಎನ್.ಡಿ.ಆರ್.ಎಫ್ ಅನುದಾನಕ್ಕೆ ರಾಜ್ಯ ಸರ್ಕಾರ ಅರ್ಜಿಕ್ಕೆ ಸಲ್ಲಿಸಲಿ.. ನಾನು ಸಹ ಅವರ ಜೊತೆ ಹೋಗುತ್ತೇನೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Suddione