Dailyhunt Logo
  • Light mode
    Follow system
    Dark mode
    • Play Story
    • App Story
ಸೆಪ್ಟೆಂಬರ್ 01 ರಂದು ಗೊರುಚ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭ

ಸೆಪ್ಟೆಂಬರ್ 01 ರಂದು ಗೊರುಚ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭ

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 28 : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಹಾಗೂ ಶಸಾಪ ಜಿಲ್ಲಾ ಘಟಕ ವತಿಯಿಂದ ಗೊರುಚ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಪತ್ರಿಕಾ ಭವನದಲ್ಲಿ ದಿನಾಂಕ: 01-09-2026 ರಂದು ಬೆಳಿಗ್ಗೆ 11-00 ಗಂಟೆಗೆ ಏರ್ಪಡಿಸಲಾಗಿದೆ.

ಭೋವಿ ಗುರುಪೀಠ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸುವರು. ದತ್ತಿ ದಾಸೋಹಿ ನಾಡೋಜ ಶ್ರೀ ಗೊ.ರು.ಚನ್ನಬಸಪ್ಪ ಗೌರವ ಉಪಸ್ಥಿತರಿರುವರು. ಅಭಾಶಸಾಪ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಹಾಗೂ ಶಿಕ್ಷಣತಜ್ಞ ಪ್ರೊ.ಕೆ.ಇ. ರಾಧಾಕೃಷ್ಣ ಪ್ರಶಸ್ತಿ ಪ್ರದಾನ ಮಾಡುವರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ದಾವಣಗೆರೆ ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ಅಭಾಶಸಾಪ ರಾಜ್ಯ ಉಪಾಧ್ಯಕ್ಷ ಕೆ.ಎಂ.ವೀರೇಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಲೇಖಕಿ ಹಾಗೂ ಕವಿಯತ್ರಿ ಡಾ.ಜಯಾ ರಾಶೇಖರ್ ಇವರಿಗೆ ಗೊರುಚ ಶರಣ ದತ್ತಿ ಪ್ರಶಸ್ತಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಪ್ರಥಮ ಕುಲಪತಿ ಹಾಗೂ ಮೈಸೂರು ವಿವಿ.ಯಲ್ಲಿ ಜಾನಪದ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಶಿವಮೊಗ್ಗ ಜಿಲ್ಲೆಯ ಡಾ.ಅಂಬಳಕಿ ಹಿರಿಯಣ್ಣ ಇವರಿಗೆ ಗೊರುಚ ಜಾನಪದ ದತ್ತಿ ಪ್ರಶಸ್ತಿ, ರಂಗಭೂಮಿ ನಟ ನಿರ್ದೇಶಕ, ಧಾರಾವಾಹಿ ಕಲಾವಿದ, ಭಾವಗೀತೆ, ಚಲನಚಿತ್ರ ಗೀತೆಗಳನ್ನು ರಚಿಸಿದ ಕೆಎಎಸ್ ಅಧಿಕಾರಿ ಡಾ.ಸಂಗಮೇಶ್ ಉಪಾಸೆ ಇವರ ನೀರಕಂಡಲ್ಲಿ ಮುಳುಗುವರಯ್ಯ ಕೃತಿಗೆ ಗೊರುಚ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ, ಗಾಯಕಿ ಹಾಗೂ ಲೇಖಕಿ ಡಾ.ಎಂ. ಕೆಂಪಮ್ಮ ಕಾರ್ಕಹಳ್ಳಿ ರಚಿಸಿದ ಮಂಡ್ಯ ಜಿಲ್ಲೆಯ ಆಚರಾಣಾತ್ಮಕ ಜಾನಪದ ಕೃತಿಗೆ ಗೊರುಚ ಜನಪದ ಸಾಹಿತ್ಯ ಗ್ರಂಥ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶಸಾಪ ಜಿಲ್ಲಾ ಕಾರ್ಯದರ್ಶಿ ಕೆ.ಪಿ.ಎಮ್ ಗಣೇಶಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddione