ಪ್ರಮುಖ ಸುದ್ದಿ
ಸಿದ್ದರಾಮಯ್ಯ ಕುರುಬ ಸಮುದಾಯದಲ್ಲೊಬ್ಬ ನಾಯಕ: ಎಚ್.ವಿಶ್ವನಾಥ್
ಚಿತ್ರದುರ್ಗ :ಕುರುಬ ಸಮುದಾಯವನ್ನು ಎಸ್.ಟಿ. ಗೆ ಸೇರ್ಪಡೆಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದೆಂದು ಎಂಎಲ್‍ಸಿ ಎಚ್.ವಿಶ್ವನಾಥ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರಿಸುವಂತೆ ಹಲವು ವರ್ಷಗಳಿಂದ ಬೇಡಿಕೆಯಿಡಲಾಗುತ್ತಿದೆ. ರಾಜಕಾರಣಿಗಳು ಯಾರು ಬಲವಾಗರಿಲಿಲ್ಲ. ಈಗ ಧಾರ್ಮಿಕ ನಾಯಕತ್ವ ಸಿಕ್ಕಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್.ಎನ್ನುವ ಪ್ರಶ್ನೆಯಿಲ್ಲ. ಪಕ್ಷಾತೀತವಾಗಿ ಎಲ್ಲರೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದರು.
ಜಾತಿ ರಾಜಕಾರಣ ಎಲ್ಲಾ ಪಕ್ಷಗಳಲ್ಲಿಯೂ ಇದೆ. ಇಲ್ಲಿ ರಾಜಕಾರಣಿಗಳನ್ನು ಟೀಕಿಸುವುದಕ್ಕಿಂತ ಮುಖ್ಯವಾಗಿ ಎಸ್.ಟಿ.ಮೀಸಲಾತಿ ಹೋರಾಟ ಪಾದಯಾತ್ರೆಯಲ್ಲಿ ನಾಲ್ಕು ಹೆಜ್ಜೆ ಹಾಕಲು ಬಂದಿದ್ದೇನೆ. ನಮ್ಮ ಸಮುದಾಯದ ಸ್ವಾಮೀಜಿಗಳ ಬಳಿಯೂ ಮಾತನಾಡಿದ್ದೇನೆ.
ಸಿದ್ದರಾಮಯ್ಯನವರು ಯಾವ ಪಕ್ಷದಲ್ಲಾದರೂ ಇರಲಿ ಅದು ಮುಖ್ಯವಲ್ಲ. ಕುರುಬ ಸಮುದಾಯಕ್ಕೆ ಅವರೊಬ್ಬ ನಾಯಕ ಎಂದಷ್ಟೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಜನಾದೇಶ ಮತದಾನದ ಮೂಲಕ ಸರ್ಕಾರಗಳು ಅಧಿಕಾರಕ್ಕೆ ಬರುತ್ತವೆ. ಆದ್ದರಿಂದ ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಗೋಷ್ಟಿಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ವಕೀಲ ಜಿ.ಎಸ್.ಕುಮಾರ್‍ಗೌಡ ಇದ್ದರು.
related stories
-
ಟಾಪ್ 40 ಸುದ್ದಿ ಗೆಲುವಿನ ನಾಗಾಲೋಟ ಖಚಿತ
-
ಹೋಂ ಹುಬ್ಬಳ್ಳಿ: ಬಿಜೆಪಿ ಮುಖಂಡ ಶಂಕ್ರಪ್ಪ ಛಬ್ಬಿ ನಿಧನ
-
ಚಿಕ್ಕಬಳ್ಳಾಪುರ ಕೇಂದ್ರ-ರಾಜ್ಯ ಸರ್ಕಾರ ವಿರುದ್ಧ ಜನಧ್ವನಿ ಜಾಥಾ