by suddionenews September 11, 2021, 2:45 pm 419 Views
ಬೆಳಗಾವಿ: ಸೋಮವಾರದಿಂದ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ದು, ಏನೆಲ್ಲಾ ಚರ್ಚಿಸಬೇಕೆಂಬುದನ್ನ ಕಾಂಗ್ರೆಸ್ ಈಗಾಗ್ಲೇ ಫ್ಲ್ಯಾನ್ ಮಾಡಿಕೊಂಡಿದೆ.
ಗೋಕಾಕ್ ನ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾತನಾಡಿದ್ದು, ಸೋಮವಾರ ಚರ್ಚಿಸಬೇಕಾದ ವಿಚಾರಗಳನ್ನು ಈಗಾಗಲೇ ಪಕ್ಷದಿಂದ ನಿರ್ಣಯ ಮಾಡಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸದನದಲ್ಲಿ ಚರ್ಚಿಸದೇ ಮಸೂದೆ ಜಾರಿಗೊಳಿಸಿವೆ. ಇದು ಸರಿಯಾದ ಕ್ರಮವಲ್ಲ, ಈ ಬಗ್ಗೆ ಸಮಗ್ರವಾಗಿ ಚರ್ಚೆಯಾಗಬೇಕು. ಒಂದು ವೇಳೆ ಇದರಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸಬೇಕು. ಈ ಬಗ್ಗೆಯೂ ಕೂಡ ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದರು.
ರೈತರು ಹಾಗೂ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವುದರ ಚರ್ಚೆ ಜೊತೆಗೆ ಮೈಸೂರ ವಿದ್ಯಾರ್ಥಿನಿ ಮೇಲಾದ ಅತ್ಯಾಚಾರದ ಪ್ರಕರಣದ ಕುರಿತಾಗಿಯೂ ಚರ್ಚೆಗಳನ್ನ ಮಾಡಲಾಗುವುದು ಎಂದಿದ್ದಾರೆ.

