Wednesday, 27 Jan, 7.30 pm ಸುದ್ದಿಒನ್

ಪ್ರಮುಖ ಸುದ್ದಿ
ತುರ್ತು ಸೇವೆಗೆ ತುರ್ತು ಸ್ಪಂದನ : 24×7 ಯಾವುದೇ ಸಮಯದಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿ : ಎಸ್ಪಿ ಜಿ.ರಾಧಿಕಾ

ಚಿತ್ರದುರ್ಗ : ಕೋಟೆನಾಡಿನಲ್ಲಿ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ (ಇಆರ್ ಎಸ್ ಎಸ್ 112) ಹಾಗೂ 11 ತುರ್ತು ಸ್ಪಂದನ ವಾಹನಗಳಿಗೆ ಪೊಲೀಸ್ ಕವಾಯತು ಮೈದಾನದಲ್ಲಿ ಹಸಿರು ನಿಶಾನೆ ತೋರಿದರು.

ಬಳಿಕ ಮಾತನಾಡಿ, ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112 ತುರ್ತು ಸಹಾಯ ಸ್ಪಂದನ ವ್ಯವಸ್ಥೆಯನ್ನು ದೇಶದಾದ್ಯಂತ ಜಾರಿಗೆ ತಂದಿದ್ದು, ಈ ಪರಿಕಲ್ಪನೆಯನ್ನು ಕರ್ನಾಟಕದಲ್ಲಿಯೂ ಸಹ ಅನುಷ್ಠಾನಗೊಳಿಸಿದ್ದು, ಅದರಂತೆ ಜಿಲ್ಲೆಯಲ್ಲಿಯೂ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ ಎಂದರು.

ಸಾರ್ವಜನಿಕರು ಪೊಲೀಸ್ ನೆರವು ಬೇಕಾದಲ್ಲಿ, ಅಗ್ನಿ ದುರಂತ ಸಂಭವಿಸಿದ್ದಲ್ಲಿ ಮತ್ತು ಇತರೆ ವಿಪತ್ತು ಸಂದರ್ಭಗಳಿಗೆ ಸಂಬಂಧಿಸಿದಂತೆ 24×7 ಯಾವುದೇ ಸಮಯದಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಬಹುದು. ಸಾರ್ವಜನಿಕರು ಕರೆ ಮಾಡಿದಾಗ ಕೇವಲ 15 ಸೆಕೆಂಡುಗಳಲ್ಲಿ ಕರೆ ಸ್ವೀಕರಿಸಿ ತ್ವರಿತವಾಗಿ ಅವರ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದರು.

ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಿದಾಗ ಬೆಂಗಳೂರಿನಲ್ಲಿರುವ Public Safety Answering Point (PSAP) ಕೇಂದ್ರದಲ್ಲಿ ಕರೆ ಸ್ವೀಕರಿಸಿ ಕರೆ ಮಾಡಿದವರ ಸ್ಥಳದ ಆಧಾರದ ಮೇಲೆ ಸಂಬಂಧಪಟ್ಟ ಜಿಲ್ಲಾ ಸಮನ್ವಯ ಕೇಂದ್ರ ಕ್ಕೆ ಕರೆಯನ್ನು ಕೂಡಲೇ ವರ್ಗಾಯಿಸಲಾಗುತ್ತದೆ. ತಕ್ಷಣ ಜಿಲ್ಲಾ ಕೇಂದ್ರದಲ್ಲಿ ಕರೆ ಮಾಡಿದ ವ್ಯಕ್ತಿಯ ವಿವರಗಳನ್ನು ಪಡೆದು ಸದರಿ ವ್ಯಕ್ತಿ ಇರುವ ಸ್ಥಳಕ್ಕೆ ಇಆರ್‌ಎೆಸ್‌ಎದಸ್ಗಾತಗಿ ಮೀಸಲಿರುವ ವಾಹನದಲ್ಲಿ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿ ಕರೆ ಮಾಡಿದವರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇದಕ್ಕಾಗಿಯೇ ಆಧುನಿಕ ತಂತ್ರಜ್ಞಾನವುಳ್ಳ ಹನ್ನೊಂದು ಹೊಸ ವಾಹನಗಳನ್ನು ಮೀಸಲಿರಿಸಿದ್ದು, ವಾಹನದಲ್ಲಿ ಪೊಲೀಸ್ ಅಧಿಕಾರಿಗಳು 24×7 ರೀತಿಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾರೆ.
ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಈ ಕೆಳಗಿನ ಯಾವುದಾದರೂ ಒಂದು ವಿಧಾನದಿಂದ ತುರ್ತು ಸೇವೆಗಳನ್ನು ಪಡೆಯಬಹುದು. ನಿಮ್ಮ ಪೋನ್ನೀಲ್ಲಿ 112 ನಂಬರಿಗೆ ಕರೆ ಮಾಡಬಹುದು, ಇಲ್ಲವೇ ಮೊಬೈಲ್ ಫೋನ್ನಲ್ಲಿ 112 ಇಂಡಿಯಾ ಆಯಪ್ ಡೌನ್ಲೋಡ್ ಮಾಡಿಕೊಂಡು ಎಸ್.ಓ.ಎಸ್ ಸೇವೆ ಬಳಕೆ ಮಾಡಬಹುದು.

www.ka.ners.in ಜಾಲತಾಣ ಇಲ್ಲವೇ [email protected] ಗೆ ಇ-ಮೇಲ್ ಕಳುಹಿಸುವ ಮೂಲಕ ಸಮಸ್ಯೆ ತಿಳಿಸಬಹುದು. ಅಷ್ಟೇ ಅಲ್ಲದೆ ಪ್ಯಾನಿಕ್ ಅಲರ್ಟ್ ಗಾಗಿ ಸಾಮಾನ್ಯ ಮೊಬೈಲ್ (ಕೀ ಪ್ಯಾಡ್ ಪೋನ್) ಪೋನಿನಲ್ಲಿ '5' ಅಥವಾ '9' ಸಂಖ್ಯೆಯನ್ನು ಲಾಂಗ್ ಪ್ರೆಸ್ ಮಾಡುವುದು. ಸಾಮಾನ್ಯ ಮೊಬೈಲ್ ಪೋನಿನಲ್ಲಿ (ಕೀ ಪ್ಯಾಡ್ ಪೋನ್) ಪವರ್ ಬಟನ್ ಅನ್ನು 3 ಅಥವಾ 5 ಭಾರಿ ವೇಗವಾಗಿ ಪ್ರೆಸ್ ಮಾಡಬೇಕು. ಆಗ ನಮಗೆ ಸಂದೇಶ ಬರುತ್ತದೆ. ಕೂಡಲೇ ಸ್ಥಳಕ್ಕೆ ಪೊಲೀಸರು ಧಾವಿಸುತ್ತಾರೆ ಎಂದು ವಿವರಿಸಿದರು.

ತೊಂದರೆಗೊಳಗಾದ ವ್ಯಕ್ತಿಗೆ ಅಪಘಾತವಾಗಿದ್ದಲ್ಲಿ ಆಸ್ಪತ್ರೆಗೆ ಕರೆ ವರ್ಗಾವಣೆ ಆಗುತ್ತದೆ. ಅಪರಾಧವಾಗಿದ್ದಲ್ಲಿ ಪೊಲೀಸ್ ಇಲಾಖೆಗೆ ಮತ್ತು ವಿಪತ್ತು ಸಂಭವಿಸಿದಲ್ಲಿ ಅಗ್ನಿಶಾಮಕ ದಳಕ್ಕೆ ಕರೆಯನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಡಿಷನಲ್ ಎಸ್ ಪಿ ಮಹಾನಿಂಗ ನಂದಗಾವಿ,
ಚಿತ್ರದುರ್ಗ ಡಿವೈ ಎಸ್ ಪಿ ಪಾಂಡುರಂಗ ಎಸ್, ಚಳ್ಳಕೆರೆ ಡಿವೈ ಎಸ್ ಪಿ ಶ್ರೀಧರ ಕೆ.ವಿ., ಹಿರಿಯೂರು ಡಿವೈ ಎಸ್ ಪಿ ರೋಷನ್ ಜಮೀರ್ ಎಸ್., ಡಿಎಆರ್ ಡಿವೈ ಎಸ್ ಪಿ ತಿಪ್ಪೇಸ್ವಾಮಿ,
ಚಿತ್ರದುರ್ಗ ಜಿಲ್ಲೆಯ ಎಲ್ಲಾ PI, CPI, ಮತ್ತು PSI ರವರುಗಳು ಸೇರಿದಂತೆ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Suddione
Top