Posts
ಶೂಟಿಂಗ್ ಆರಂಭಿಸಲು ರಾಜಮೌಳಿಯ 'ಆರ್ಆರ್ಆರ್' ಟೀಮ್ ರೆಡಿ! ಮುಂಜಾಗ್ರತಾ ಕ್ರಮಗಳೇನು?

ಮೂಲಗಳ ಪ್ರಕಾರ, ಅ.10ರಿಂದ ಶೂಟಿಂಗ್ ಶುರು ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ. ಆದರೆ, ಅದಕ್ಕೂ ಮೊದಲು 2 ವಾರ ಇಡೀ ತಂಡವನ್ನು ಖಾಸಗಿ ಹೋಟೆಲ್ಗಳಲ್ಲಿ ಕ್ವಾರಂಟೈನ್ ಮಾಲಾಗಿದೆ ಎಂದು ಮಾಹಿತಿ ಕೇಳಿಬಂದಿದೆ. ಪ್ರತಿಯೊಬ್ಬರನ್ನು ಪರೀಕ್ಷೆ ಮಾಡಿಯೇ ಚಿತ್ರೀಕರಣದ ಸೆಟ್ನ ಒಳಗೆ ಬಿಡಲಾಗುತ್ತದೆ. ಅಲ್ಲದೆ, ಶೂಟಿಂಗ್ಗೆ ಬಳಸುವ ಪ್ರತಿಯೊಂದು ಪರಿಕರಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಟೀಸರ್ ಶೂಟ್ನಿಂದಲೇ ಆರಂಭ
ರಾಮ್ ಚರಣ್ ಹುಟ್ಟುಹಬ್ಬಕ್ಕೆ ಅವರ ಒಂದು ಟೀಸರ್ ರಿಲೀಸ್ ಮಾಡಲಾಗಿತ್ತು. ಅದೇ ಥರ ಜೂ. ಎನ್ಟಿಆರ್ ಹುಟ್ಟುಹಬ್ಬದಂದು ಸಹ ಒಂದು ಟೀಸರ್ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಕಾದಿದ್ದರು.
ಆದರೆ, ಅದು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಕೊರೊನಾ ಅಟ್ಟಹಾಸ ಆರಂಭಿಸಿತ್ತು. ಇದೀಗ ಜೂ. ಎನ್ಟಿಆರ್ ಅವರ ಟೀಸರ್ನಿಂದಲೇ ಶೂಟಿಂಗ್ ಆರಂಭಿಸುವುದಕ್ಕೆ ತಂಡ ಸಿದ್ಧವಾಗಿದೆ. ಮೊದಲು ಟೀಸರ್ ಶೂಟ್ ಮಾಡಿ, ಅದನ್ನು ರಿಲೀಸ್ ಮಾಡುವ ಪ್ಲ್ಯಾನ್ ಇರಬಹುದು ಎಂದು ಹೇಳಲಾಗುತ್ತಿದೆ.
ಜೂ.ಎನ್ಟಿಆರ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ 'ಆರ್ಆರ್ಆರ್' ನಿರ್ದೇಶಕ ರಾಜಮೌಳಿ!
ಡಿವಿವಿ ದಾನಯ್ಯ ನಿರ್ಮಾಣದ ಈ ಸಿನಿಮಾವು ತೆಲುಗು, ಕನ್ನಡ ಸೇರಿದಂತೆ 5ಕ್ಕೂ ಅಧಿಕ ಭಾಷೆಗಳಲ್ಲಿ ತೆರೆಗೆ ಬರಲಿದೆ. ಆಲಿಯಾ ಭಟ್, ಅಜಯ್ ದೇವ್ಗನ್, ಸಮುದ್ರಖಣಿ ಸೇರಿದಂತೆ ಸಾಕಷ್ಟು ಕಲಾವಿದರು ಇದರಲ್ಲಿ ಬಣ್ಣಹಚ್ಚಿದ್ದಾರೆ. ಎಂಎಂ ಕೀರವಾಣಿ ಸಂಗೀತ ಚಿತ್ರಕ್ಕೆ ಇರಲಿದೆ.
related stories
-
ಮನರಂಜನೆ ದಸರಾಗೆ ರೌದ್ರಂ ರಣಂ ರುಧಿರಂ ಸುನಾಮಿ
-
ಬಾಲಿವುಡ್ ಪ್ರಭಾಸ್ ಹೆಸರು ಹೇಳಿ ಮೋಸ: ಪೊಲೀಸ್ ಠಾಣೆಯಲ್ಲಿ ದೂರು
-
ಸ್ಯಾಂಡಲ್ವುಡ್ ಸುದ್ದಿ ಕನ್ನಡದಲ್ಲೂ ಬರ್ತಿದೆ ಆರ್ಜಿವಿ 'ಡಿ ಕಂಪೆನಿ'