Posts
'ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ'- ಡ್ರಗ್ ಪ್ರಕರಣದ ಬಗ್ಗೆ ಅಭಿಷೇಕ್ ಅಂಬರೀಷ್ ಖಡಕ್ ಹೇಳಿಕೆ!

ವಿಚಾರಣೆಗೆ ಹೋಗಿಬಂದವರನ್ನೆಲ್ಲ ಬೇರೆ ರೀತಿ ತೋರಿಸಲಾಗುತ್ತಿದೆ. ಅಮಾಯಕರಿಗೆ ತೊಂದರೆ ಆಗಬಾರದು. ನಮ್ಮ ತಂದೆಯವರ ಸಿನಿಮಾದಲ್ಲಿ (ಅಂಬಿ ನಿಂಗ್ ವಯಸ್ಸಾಯ್ತೋ) ನಟಿಸಿದ್ದ ಹುಡುಗ ಅಭಿಷೇಕ್ ದಾಸ್ ಅಂತ. ಅವರನ್ನೂ ವಿಚಾರಣೆಗೆ ಕರೆಸಿಕೊಂಡಿದ್ದರು. ಪಾಪ ಅವರಿಗೆ ಇದರಿಂದ ಒಂದು ಸಿನಿಮಾ ಅವಕಾಶ ಕೈತಪ್ಪಿ ಹೋಯ್ತು ಅಂತ ಒಂದು ಆರ್ಟಿಕಲ್ ಓದಿದೆ, ಬೇಜಾರಾಯ್ತು. ಒಂದು ಸಿನಿಮಾ ಅವಕಾಶ ಮಿಸ್ ಆಗುವುದು ಸಣ್ಣ ವಿಚಾರವಲ್ಲ. ಅವರ ಹೊಟ್ಟೆಗೆ ಹೊಡೆದಂಗೆ ಆಗತ್ತೆ. ಕೆಲ ಅಮಾಯಕರನ್ನೂ ವಿಚಾರಣೆಗೆ ಕರೆದಿದ್ದಾರೆ. ಅಷ್ಟಕ್ಕೆ ಅವರ ತಪ್ಪು ಇರುವುದಿಲ್ಲ. ತಪ್ಪು ಮಾಡಿದವರು ಅನುಭವಿಸುತ್ತಾರೆ ಬಿಡಿ' ಎಂದು ಅಭಿಷೇಕ್ ತಿಳಿಸಿದ್ದಾರೆ.
'ನನಗೆ ಚಿತ್ರರಂಗದಲ್ಲಿ ಎಲ್ಲರೂ ಪರಿಚಯ. ಅವರು ತಪ್ಪು ಮಾಡಿದ್ದಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಅವರ ಜೀವನದಲ್ಲಿ, ಅವರ ಮನೆಗಳಲ್ಲಿ ಏನೇನೂ ಮಾಡುತ್ತಾರೆ ಅನ್ನೋದು ನನಗೆ ಗೊತ್ತಾಗುವುದಿಲ್ಲ.
ವಿಚಾರಣೆಗೆ ಕರೆದಕೂಡಲೇ ಅವರು ಕ್ರಿಮಿನಲ್ಗಳಾಗುವುದಿಲ್ಲ, ಅಪರಾಧಿಗಳಾಗುವುದಿಲ್ಲ. ಹಾಗಾಗಿ, ಯಾರ ಚಾರಿತ್ರ್ಯಹರಣ ಮಾಡಬಾರದು. ಬಹುಶಃ ಮೂರ್ನಾಲ್ಕು ಜನ ತಪ್ಪು ಮಾಡಿರಬಹುದು. ಹಾಗಂತ ನಮ್ಮ ಚಿತ್ರರಂಗ ಕೆಟ್ಟದ್ದು ಅಂತ ಹೇಳೋಕೆ ಆಗುವುದಿಲ್ಲ. 10 ಸಾವಿರ ಜನರಲ್ಲಿ 3 ಜನ ತಪ್ಪು ಮಾಡಿದ್ದರೆ ಅದು ಚಿತ್ರರಂಗದ ತಪ್ಪು ಅನ್ನೋಕೆ ಆಗುವುದಿಲ್ಲ' ಎಂದು ಅಭಿಷೇಕ್ ಹೇಳಿದ್ದಾರೆ.
'ಪ್ರೀತಿಯ ಅಂಬಿ ಅಂಕಲ್, ನನ್ನನ್ನು ಆಶೀರ್ವದಿಸಿ' ಎಂದ 'ಗಟ್ಟಿಮೇಳ' ಧಾರಾವಾಹಿ ನಟ ಅಭಿಷೇಕ್
ಇಂದು ಅಭಿಷೇಕ್ ಅಂಬರೀಷ್ ಅವರ ಜನ್ಮದಿನವಾಗಿದ್ದರಿಂದ, ಅವರ ಮುಂದಿನ 'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಅನೇಕರು ಅದನ್ನು ನೋಡಿ ಮೆಚ್ಚಿಕೊಂಡಿದ್ದಾರೆ. 'ದುನಿಯಾ' ಸೂರಿ ಇದರ ನಿರ್ದೇಶಕ. ಇನ್ನು, ನಟ ದರ್ಶನ್ ಸೇರಿದಂತೆ ಚಿತ್ರರಂಗದ ಅನೇಕರು ಅಭಿಷೇಕ್ಗೆ ಜನ್ಮದಿನ ಶುಭಾಶಯಗಳನ್ನು ಕೋರುತ್ತಿದ್ದಾರೆ.