Dailyhunt Logo
  • Light mode
    Follow system
    Dark mode
    • Play Story
    • App Story
ದಾಳಿಗೆ ಪ್ರತಿದಾಳಿ ಇದ್ದೇ ಇದೆ; ಅಮೆರಿಕಕ್ಕೆ ಇರಾನ್ ಖಡಕ್ ಎಚ್ಚರಿಕೆ

ದಾಳಿಗೆ ಪ್ರತಿದಾಳಿ ಇದ್ದೇ ಇದೆ; ಅಮೆರಿಕಕ್ಕೆ ಇರಾನ್ ಖಡಕ್ ಎಚ್ಚರಿಕೆ

ಮೆರಿಕವು ತಮ್ಮ ಮೇಲೆ ಮತ್ತೆ ಸೇನಾ ದಾಳಿ ನಡೆಸಿದರೆ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಹಾಗೂ ಪ್ರಾದೇಶಿಕ ಹಿತಾಸಕ್ತಿಗಳ ಮೇಲೆ ತೀವ್ರ ಮತ್ತು ನೋವುಂಟುಮಾಡುವ ಸರಣಿ ದಾಳಿಗಳನ್ನು ನಡೆಸಲಾಗುವುದು ಎಂದು ಇರಾನ್‌ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ಸ್ ಕಟುವಾಗಿ ಎಚ್ಚರಿಸಿದೆ.

ಅಮೆರಿಕದಿಂದ ಮತ್ತೊಂದು ಹಂತದ ಬಾಂಬ್ ದಾಳಿ ನಡೆಯಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ಯುದ್ಧದ ವಾತಾವರಣ ತೀವ್ರಗೊಂಡಿದೆ. ಹಾರ್ಮುಜ್ ಜಲಸಂಧಿ ತೆರೆಯಲು ಒಪ್ಪದ ಇರಾನ್, ಅಮೆರಿಕವು ತನ್ನ ಪ್ರಮುಖ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸದ ಹೊರತು ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.

ವಿಶ್ವದ ಒಟ್ಟು ತೈಲ ಪೂರೈಕೆಯ ಮಹತ್ವದ ಭಾಗ ಹಾದುಹೋಗುವ ಈ ಜಲಸಂಧಿಯ ಭದ್ರತೆ ಹಾಗೂ ಸಂಚಾರದ ಕುರಿತು ಇರಾನ್ ತಳೆದಿರುವ ಬಿಗಿನಿಲುವು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಗಂಭೀರ ಪರಿಣಾಮ ಬೀರಲಿದೆ. ರಾಜತಾಂತ್ರಿಕ ಮಾತುಕತೆಗೆ ಕಠಿಣ ಷರತ್ತುಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸುವುದು ಸೇರಿದಂತೆ ತಮ್ಮ ಪ್ರಮುಖ ಷರತ್ತುಗಳನ್ನು ಅಮೆರಿಕ ಒಪ್ಪಿಕೊಳ್ಳದಿದ್ದರೆ ಯಾವುದೇ ರೀತಿಯ ರಾಜತಾಂತ್ರಿಕ ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಕದನ ವಿರಾಮ ಏರ್ಪಡುವ ಹಾಗೂ ಶಾಂತಿ ಸ್ಥಾಪನೆಯಾಗುವ ಭರವಸೆಗಳು ಅನಿಶ್ಚಿತತೆಗೆ ಸಿಲುಕಿವೆ.

ಅಮೆರಿಕದಿಂದ ಪ್ರಯಾಣ ಎಚ್ಚರಿಕೆ ಹಾಗೂ ಜಾಗರೂಕತೆ ಸೂಚನೆ ಮಧ್ಯಪ್ರಾಚ್ಯದಲ್ಲಿ ನಿರಂತರವಾಗಿ ಭದ್ರತಾ ಪರಿಸ್ಥಿತಿ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದ ವಿದೇಶಾಂಗ ಸಚಿವಾಲಯವು ಪ್ರಾಂತ್ಯದಲ್ಲಿರುವ ತನ್ನ ನಾಗರಿಕರಿಗೆ ಹೊಸ ಪ್ರಯಾಣ ಸಲಹೆಯನ್ನು ಬಿಡುಗಡೆ ಮಾಡಿದೆ. ಅಮೆರಿಕನ್ ನಾಗರಿಕರು ತಕ್ಷಣವೇ ಇರಾನ್ ತೊರೆಯುವಂತೆ ಹಾಗೂ ಮಧ್ಯಪ್ರಾಚ್ಯದಾದ್ಯಂತ ಹೆಚ್ಚಿನ ಜಾಗರೂಕತೆಯಿಂದ ಇರುವಂತೆ ಅಮೆರಿಕ ಸೂಚಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: The Federal karnaataka