Dailyhunt Logo
  • Light mode
    Follow system
    Dark mode
    • Play Story
    • App Story
ಸಚಿವ ಸಂಪುಟ ಸಭೆ| ಹೈಸ್ಪೀಡ್ ರೈಲು, ಗ್ರೇಟರ್ ಬೆಂಗಳೂರು ಸೇರಿ ಹಲವು ಯೋಜನೆಗಳಿಗೆ ಅನುಮೋದನೆ

ಸಚಿವ ಸಂಪುಟ ಸಭೆ| ಹೈಸ್ಪೀಡ್ ರೈಲು, ಗ್ರೇಟರ್ ಬೆಂಗಳೂರು ಸೇರಿ ಹಲವು ಯೋಜನೆಗಳಿಗೆ ಅನುಮೋದನೆ

ರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಹಲವು ಪ್ರಮುಖ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮೂಲಸೌಕರ್ಯ, ಆರೋಗ್ಯ, ಶಿಕ್ಷಣ ಮತ್ತು ಸಾರಿಗೆ ಕ್ಷೇತ್ರಗಳಿಗೆ ಈ ಬಾರಿಯ ಸಭೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

ಮೂಲಸೌಕರ್ಯ ಮತ್ತು ಸಾರಿಗೆ

ಹೈಸ್ಪೀಡ್ ರೈಲು ಕಾರಿಡಾರ್: ಹೈದರಾಬಾದ್-ಬೆಂಗಳೂರು (607 ಕಿ.ಮೀ) ಮತ್ತು ಚೆನ್ನೈ-ಬೆಂಗಳೂರು ನಡುವಿನ ಹೈ ಸ್ಪೀಡ್ ರೈಲು ಕಾರಿಡಾರ್ ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಹೈದರಾಬಾದ್ ಮಾರ್ಗದಲ್ಲಿ ರಾಜ್ಯದೊಳಗೆ 101.13 ಕಿ.ಮೀ ಮಾರ್ಗವಿರಲಿದ್ದು, ದೇವನಹಳ್ಳಿ ವಿಮಾನ ನಿಲ್ದಾಣ ಸೇರಿದಂತೆ ಒಟ್ಟು 15 ನಿಲ್ದಾಣಗಳು ಬರಲಿವೆ.

ವಿಮಾನಯಾನ ಪ್ರೋತ್ಸಾಹ: ಬೆಂಗಳೂರು-ಬೀದರ್ ಮತ್ತು ಬೆಂಗಳೂರು-ಕಲಬುರಗಿ ಮಾರ್ಗಗಳ ವಿಮಾನ ಸೇವೆಗೆ ವಾರ್ಷಿಕ 28.47 ಕೋಟಿ ರೂ. ಪ್ರೋತ್ಸಾಹ ಧನ (VGF) ನೀಡಲು ನಿರ್ಧರಿಸಲಾಗಿದೆ.

ಹೊಸ ಬಸ್ಸುಗಳ ಖರೀದಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) 32 ಕೋಟಿ ರೂ. ವೆಚ್ಚದಲ್ಲಿ 80 ಹೊಸ ನಗರ ಸಾರಿಗೆ ಬಸ್ಸುಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.

ಗ್ರೇಟರ್ ಬೆಂಗಳೂರು ಮತ್ತು ಕೈಗಾರಿಕಾ ಅಭಿವೃದ್ಧಿ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ: ರಾಮನಗರ ತಾಲ್ಲೂಕಿನ 9 ಗ್ರಾಮಗಳ ಸುಮಾರು 7,481 ಎಕರೆ ಪ್ರದೇಶದಲ್ಲಿ 18,133 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಭೂಮಿ ನೀಡುವ ರೈತರಿಗೆ ಪ್ರತಿ ಎಕರೆಗೆ 50% ರಷ್ಟು (9,693 ಚದರ ಅಡಿ) ಅಭಿವೃದ್ಧಿಪಡಿಸಿದ ಭೂಮಿಯನ್ನು ಪರಿಹಾರವಾಗಿ ನೀಡಲಾಗುವುದು.

ಸೆಮಿಕಂಡಕ್ಟರ್ ಪಾರ್ಕ್: ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್‌ನಲ್ಲಿ (BSBP) 'ಅಪ್ರೈಡ್ ಮೆಟೀರಿಯಲ್ಸ್' ಸಂಸ್ಥೆಗೆ ಸೆಮಿಕಂಡಕ್ಟರ್ ಮತ್ತು R&D ಘಟಕ ಸ್ಥಾಪಿಸಲು 140 ಎಕರೆ ಜಮೀನು ಹಂಚಿಕೆಗೆ ಒಪ್ಪಿಗೆ ನೀಡಲಾಗಿದೆ.

KSDL ಘಟಕ: ವಿಜಯಪುರದ ಇಟ್ಟಂಗಿಹಾಳದಲ್ಲಿ ₹227.91 ಕೋಟಿ ವೆಚ್ಚದಲ್ಲಿ ಹೊಸ ಸೋಪು ಮತ್ತು ಮಾರ್ಜಕ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮೋದನೆ ದೊರೆತಿದೆ.

ಆರೋಗ್ಯ ಮತ್ತು ಶಿಕ್ಷಣ

MRI ಯಂತ್ರಗಳ ಖರೀದಿ: ರಾಷ್ಟ್ರೀಯ ಉಚಿತ ಆರೋಗ್ಯ ಪತ್ತೆ ಯೋಜನೆಯಡಿ 6 ಜಿಲ್ಲಾ ಆಸ್ಪತ್ರೆಗಳಿಗೆ 81 ಕೋಟಿ ರೂ. ವೆಚ್ಚದಲ್ಲಿ 6 MRI ಯಂತ್ರಗಳ ಪೂರೈಕೆಗೆ ಅನುಮೋದನೆ ನೀಡಲಾಗಿದೆ.

ನವಜಾತ ಶಿಶುಗಳ ತಪಾಸಣೆ: ಅಪರೂಪದ ಜನ್ಮಜಾತ ಅಸ್ವಸ್ಥತೆಗಳನ್ನು ಪತ್ತೆಹಚ್ಚಲು 'Universal Newborn Screening Scheme' ಅನುಷ್ಠಾನಕ್ಕೆ 558.95 ಲಕ್ಷ ರೂ. ಮೀಸಲಿಡಲಾಗಿದೆ.

ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್: ನೋಂದಾಯಿತ ಕಾರ್ಮಿಕರ ಮಕ್ಕಳಿಗೆ (1 ರಿಂದ 12ನೇ ತರಗತಿ) 115.84 ಕೋಟಿ ರೂ. ವೆಚ್ಚದಲ್ಲಿ ಶಾಲಾ ಕಿಟ್‌ಗಳ ವಿತರಣೆ. ಪ್ರತಿ ಕಿಟ್ ಬೆಲೆ 8,625 ರೂ. ಆಗಿರಲಿದೆ.

ಪ್ರಾದೇಶಿಕ ಅಭಿವೃದ್ಧಿ ಮತ್ತು ಇತರ ನಿರ್ಧಾರಗಳು

ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿ: 2026-28ನೇ ಸಾಲಿನಲ್ಲಿ ಅಲ್ಪಸಂಖ್ಯಾತರು ವಾಸಿಸುವ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರೂ. ಕ್ರಿಯಾ ಯೋಜನೆಗೆ ಸಮ್ಮತಿ.

ರಸ್ತೆ ಮರು ಡಾಂಬರೀಕರಣ: ಕಲಬುರಗಿ ಜಿಲ್ಲೆಯ ಅಫಜಲಪುರ ಮತ್ತು ಚೌಡಾಪುರ ಭಾಗದ ರಸ್ತೆ ಕಾಮಗಾರಿಗಳಿಗೆ 28.97 ಕೋಟಿ ರೂ. ಅನುಮೋದನೆ. ಪುತ್ತೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 118ರ ಅಭಿವೃದ್ಧಿಗೆ 13 ಕೋಟಿ ರೂ. ಅನುದಾನ.

ತಿರುಮಲ ಕರ್ನಾಟಕ ಛತ್ರ: ಆಂಧ್ರಪ್ರದೇಶದ ತಿರುಮಲದಲ್ಲಿರುವ ಕರ್ನಾಟಕ ರಾಜ್ಯ ಛತ್ರದ ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (KSTDC) ವಹಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: The Federal karnaataka