
ವಿಶ್ವದ ಟೆಕ್ ದಿಗ್ಗಜ ಗೂಗಲ್ ಕಂಪನಿಯು ಹೊಸ ಅಪ್ಲಿಕೇಶನ್ ಒಂದನ್ನು ಪರಿಚಯಿಸುತ್ತಿದೆ, ಈ ಆ್ಯಪ್ ಮೂಲಕ ಹಣವನ್ನು ಗಳಿಸಬಹುದು ಹೇಗೆ ಎಂದು ತಿಳಿಯೋಣ.
"ಗೂಗಲ್ ಟಾಸ್ಕ್ ಮೇಟ್" ಎಂಬ ಹೊಸ ಆ್ಯಪ್ ಅನ್ನು ಗೂಗಲ್ ಭಾರತದಲ್ಲಿ ಬೀಟಾ ವರ್ಷನ್ ಆ್ಯಪ್ ಅನ್ನು ಪರೀಕ್ಷಿಸಲಾಗುತ್ತಿದೆ, ಮತ್ತು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಸರಳವಾದ ಚಟುವಟಿಕೆಗಳನ್ನು ಪೂರ್ಣಗೊಳಿಸುವ ಮೂಲಕ ಹಣವನ್ನು ಸಂಪಾದಿಸಬಹುದು, ಗೂಗಲ್ ಟಾಸ್ಕ್ ಮೇಟ್ ಆ್ಯಪ್ ನಲ್ಲಿ ವಿವಿಧ ರೀತಿಯ ಚಟುವಟಿಕೆಗಳಿಗೆ ಈ ಆ್ಯಪ್ ನಲ್ಲಿ ಕೇಳಲಾದ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿರುವ ರೆಸ್ಟೋರೆಂಟ್, ಹೋಟೆಲ್, ಸ್ಕೂಲ್, ಹಾಸ್ಪಿಟಲ್, ಬ್ಯಾಂಕ್, ಎಟಿಎಂ ಮತ್ತು ಇನ್ನಿತರ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಚಿತ್ರವನ್ನು ಕ್ಲಿಕ್ ಮಾಡಿ ಗೂಗಲ್ ಟಾಸ್ಕ್ ಮೇಟ್ ಆ್ಯಪನಲ್ಲಿ ಅಪ್ಲೋಡ್ ಮಾಡುವುದು, ಹಾಗೂ ಗೂಗಲ್ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವುದು ಅಥವಾ ಇಂಗ್ಲಿಷ್‌ನಿಂದ ಇತರ ಭಾಷೆಗಳಿಗೆ ವಾಕ್ಯಗಳನ್ನು ಭಾಷಾಂತರಿಸಲು ಸಹಾಯ ಮಾಡುವುದು ಮುಂತಾದ ಹಲವು ಚಟುವಟಿಕೆಗಳನ್ನು ಈ ಆ್ಯಪನಲ್ಲಿ ಸೇರಿವೆ.
ಅಪ್ಲಿಕೇಶನ್ ಪ್ರಸ್ತುತ ಬೀಟಾ version ನಲ್ಲಿದೆ ಮತ್ತು ರೆಫರಲ್ ಕೋಡ್ ಬಳಸಿ ಈ ಆ್ಯಪನಲ್ಲಿ ಲಾಗಿನ್ ಮಾಡಿಕೊಳ್ಳಬೇಕಾಗುತ್ತದೆ,
ಬಳಕೆದಾರರು ಪೂರ್ಣಗೊಳಿಸಿದ ಚಟುವಟಿಕೆಗಳಿಗೆ ಬಳಕೆದಾರರಿಗೆ ಸ್ಥಳೀಯ ಕರೆನ್ಸಿಯಲ್ಲಿ ಹಣವನ್ನು ಪಾವತಿಸಲಾಗುತ್ತದೆ. ಗೂಗಲ್ ಟಾಸ್ಕ್ ಮೇಟ್ ಆ್ಯಪ್ ಗೂಗಲ್ ಪ್ಲೇ ಸ್ಟೋರನಲ್ಲಿ ಡೌನ್‌ಲೋಡ್ ಮಾಡಲು ಅಪ್ಲಿಕೇಶನ್ ಲಭ್ಯವಿದ್ದರೂ, ನೀವು ರೆಫರಲ್ ಕೋಡ್ ಹೊಂದಿಲ್ಲದಿದ್ದರೆ ನೀವು ಅದನ್ನು ಬಳಸಲಾಗುವುದಿಲ್ಲ, ಅದು ಆಹ್ವಾನದಿಂದ ಮಾತ್ರ ಲಭ್ಯವಿದೆ, ಈ ಆ್ಯಪನ್ನು ಬಳಸಲು ರೆಫರಲ್ ಕೋಡ್ ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗೂಗಲ್ ಪ್ಲೇ ಸ್ಟೋರನಲ್ಲಿ ಅಪ್ಲಿಕೇಶನ್ ವಿವರಣೆಯಲ್ಲಿ ಟಾಸ್ಕ್ ಮೇಟ್ ಅನ್ನು ಬಳಸಲು ಮೂಲಭೂತವಾಗಿ ಮೂರು ಹಂತಗಳಿವೆ: ಚಟುವಟಿಕೆಗಳನ್ನು ಸಿಟ್ಟಿಂಗ್ ಟಾಸ್ಕ್ ಅಥವಾ ಫೀಲ್ಡ್ ಟಾಸ್ಕ್ ಎಂದು ವರ್ಗೀಕರಿಸಲಾಗಿದೆ, ಗೂಗಲ್ ಕೇಳಲಾದ ನಿಮ್ಮ ಹತ್ತಿರದ ಸ್ಥಳಗಳಲ್ಲಿನ ವಿವರಣೆಯನ್ನು ಹುಡುಕಿ ಚಟುವಟಿಕೆಯನ್ನು ಪೂರ್ಣಗೊಳಿಸುವುದು, ಹಾಗೂ ಅಪ್ಲಿಕೇಶನ್‌ನಲ್ಲಿ, ಪೂರ್ಣಗೊಂಡ ಚಟುವಟಿಕೆಗಳ ಸಂಖ್ಯೆ ಮತ್ತು ಅವುಗಳ ಗುಣಮಟ್ಟವನ್ನು ಆ್ಯಪನಲ್ಲಿ ಪರಿಶೀಲಿಸಬಹುದು.
ಅಂಗಡಿ ಮುಂಭಾಗಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವಂತಹ ಚಟುವಟಿಕೆಗಳು ಹಾಗೂ ಮ್ಯಾಪಿಂಗ್ ಸೇವೆಗಳನ್ನು ಸುಧಾರಿಸಲು ಮತ್ತು ಆನ್‌ಲೈನ್‌ನಲ್ಲಿ ವ್ಯಾಪಾರವನ್ನು ಹೆಚ್ಚಿಸಲು ಗೂಗಲ್ ಸಹಾಯ ಮಾಡುತ್ತದೆ ಎಂದು ವರದಿಯಾಗಿದೆ. ನಿಮಗೆ ಕಾರ್ಯದಲ್ಲಿ ಆಸಕ್ತಿ ಇಲ್ಲದಿದ್ದರೆ ಅಥವಾ ಅದನ್ನು ಮಾಡಲು ಸಾಧ್ಯವಾಗದಿದ್ದರೆ, ನೀವು ಅದನ್ನು ಬಿಟ್ಟುಬಿಡಲು ಆಯ್ಕೆಯನ್ನು ಸಹ ನೀಡಲಾಗಿದೆ.
ಹೆಚ್ಚಿನ ಟೆಕ್ ಮಾಹಿತಿಗಳಿಗಾಗಿ theprimenewz ಅನ್ನು ಅನುಸರಿಸಿ.
ಪೂರ್ಣಗೊಂಡ ಚಟುವಟಿಕೆಗಳ ಮೂಲಕ ಗಳಿಸಿದ ಹಣವನ್ನು ನಗದು ಮಾಡಲು ನೀವು ಸಿದ್ಧರಾದಾಗ, ನಿಮ್ಮ ಇ-ವ್ಯಾಲೆಟ್ ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ಟಾಸ್ಕ್ ಮೇಟ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಬೇಕು, ಅಪ್ಲಿಕೇಶನ್ ವಿವರಣೆಯ ಪ್ರಕಾರ ನಿಮ್ಮ ಸ್ಥಳೀಯ ಕರೆನ್ಸಿಯಲ್ಲಿನ ಹಣವನ್ನು ಹಿಂಪಡೆಯಲು ನಿಮಗೆ ಸಾಧ್ಯವಾಗುತ್ತದೆ. ಮತ್ತು ಹೆಚ್ಚಿನ ಬಳಕೆದಾರರು ಟಾಸ್ಕ್ ಮೇಟ್ ಆ್ಯಪನ್ನು ಬಳಸಲು ಪೂರ್ಣ ಪ್ರಮಾಣದ ಆ್ಯಪ್ ಯಾವಾಗ ಲಭ್ಯವಿರುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
Source - theprimenewz.in