ಕೇರಳ : ಖ್ಯಾತ ನಟಿ ಮಮಿತಾ ಬೈಜು ತೀವ್ರ ಜ್ವರ ಹಾಗೂ ಆಸ್ತಮಾ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಈ ವಾರ ನಿಗದಿಯಾಗಿದ್ದ ತಮ್ಮ ಆಸ್ಟ್ರೇಲಿಯಾ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಕ್ಲೈಡ್ ಮಲಯಾಳಿ ಅಸೋಸಿಯೇಷನ್ ಆಯೋಜಿಸಿದ್ದ ಓಣಂ ಸಂಭ್ರಮಾಚರಣೆಯಲ್ಲಿ ಮಮಿತಾ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು.
ಆಯೋಜಕರಿಗೆ ಮತ್ತು ನನ್ನನ್ನು ನಿರೀಕ್ಷಿಸುತ್ತಿದ್ದ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸುವ ಇನ್ನೊಂದು ಅವಕಾಶ ಸಿಗಲಿದೆ ಎಂದು ಭಾವಿಸುತ್ತೇನೆ" ಎಂದಿದ್ದಾರೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ: ಇನ್ನೊಂದೆಡೆ, ಮಮಿತಾ ಬೈಜು ಅಭಿನಯದ ಇತ್ತೀಚಿನ ಚಿತ್ರ 'ಬೆಥ್ಲೆಹೆಮ್ ಕುಡುಂಬ ಯುನಿಟ್' ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಅವರು 'ಆಶ್ಲೇ' ಎಂಬ ಯುವತಿಯ ಪಾತ್ರದಲ್ಲಿ ನಟಿಸಿದ್ದು, ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.

