ಮುಂಬೈ: ಬಾಲಿವುಡ್‌ನ ಖ್ಯಾತ ನಟ ಆಮೀರ್ ಖಾನ್ (61) ಅವರು ಉದ್ಯಮಿ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಭಾನುವಾರ (ಜುಲೈ 5) ಮುಂಬೈನ ಪಾಲಿ ಹಿಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅತ್ಯಂತ ಸರಳ ಹಾಗೂ ಆಪ್ತ ವಾತಾವರಣದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾವುದೇ ಅದ್ದೂರಿ ಆಡಂಬರಗಳಿಲ್ಲದೆ, ಕೇವಲ ಕುಟುಂಬದ ಸದಸ್ಯರು ಮತ್ತು ಅತ್ಯಂತ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ನೋಂದಾಯಿತ ವಿವಾಹ (Registered Marriage) ಮಾಡಿಕೊಂಡಿದೆ.ಮದುವೆಯ ಮೊದಲ ಅಧಿಕೃತ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳಿಂದ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.ವಿವಾಹದ ವಿಶೇಷ ಸಂದರ್ಭಕ್ಕಾಗಿ ನವವಧು ಗೌರಿ ಸ್ಪ್ರ್ಯಾಟ್ ಅವರು ಐವರಿ ಲೇಸ್ ಸ್ಯೂಟ್ ಧರಿಸಿ, ಲೇಯರ್ಡ್ ಆಭರಣಗಳು ಹಾಗೂ ಫಿಶ್‌ಟೇಲ್ ಜಡೆಯೊಂದಿಗೆ ಅತ್ಯಂತ ಆಕರ್ಷಕವಾಗಿ ಕಂಗೊಳಿಸಿದರು.
ಆ ಸ್ನೇಹವೇ ಮುಂದೆ ಪ್ರೀತಿಗೆ ತಿರುಗಿತು. ಎರಡು ವಿಚ್ಛೇದನಗಳ (Divorce) ನಂತರ ನನ್ನ ಜೀವನದಲ್ಲಿ ಮತ್ತೆ ಪ್ರೀತಿ ಸಿಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ" ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದರು.ಇದು ಆಮೀರ್ ಖಾನ್ ಅವರ ಮೂರನೇ ವಿವಾಹವಾಗಿದೆ. ಅವರ ಮೊದಲ ಪತ್ನಿ ರೀನಾ ದತ್ತಾ ಅವರಿಗೆ ಜುನೈದ್ ಮತ್ತು ಇರಾ ಖಾನ್ ಎಂಬ ಮಕ್ಕಳಿದ್ದಾರೆ. ಇನ್ನು ಎರಡನೇ ಪತ್ನಿ ಕಿರಣ್ ರಾವ್ ಅವರಿಗೆ ಆಜಾದ್ ರಾವ್ ಖಾನ್ ಎಂಬ ಮಗನಿದ್ದಾನೆ. ಈ ವಿವಾಹದ ವಿಶೇಷವೆಂದರೆ, ಆಮೀರ್ ಖಾನ್ ಅವರ ಇಬ್ಬರೂ ಮಾಜಿ ಪತ್ನಿಯರಾದ ರೀನಾ ದತ್ತಾ ಹಾಗೂ ಕಿರಣ್ ರಾವ್ ಅವರು ಮದುವೆಯ ಸಂಭ್ರಮದಲ್ಲಿ ಖುದ್ದಾಗಿ ಪಾಲ್ಗೊಂಡು, ನವದಂಪತಿಗೆ ಮನಸಾರೆ ಹರಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

