ಬಜ್ಪೆ ಸೆಪ್ಟೆಂಬರ್ 02: ಮಂಗಳೂರು-ಕಟೀಲು ಮುಖ್ಯರಸ್ತೆಯ ಕರಂಬಾರು ಬಳಿ ಮಳೆನೀರು ಹರಿದುಹೋಗಲು ನಿರ್ಮಿಸಲಾಗಿದ್ದ ಕಿರುಸೇತುವೆಯ ಒಂದು ಭಾಗ ದಿಢೀರ್ ಕುಸಿದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗದ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕಟೀಲು ಕಡೆಯಿಂದ ಮಂಗಳೂರು ಕಡೆಗೆ ತೆರಳುವ ರಸ್ತೆಯ ಭಾಗದಲ್ಲಿರುವ ಕಿರುಸೇತುವೆಯ ಅಡಿಭಾಗ ಕುಸಿದಿರುವುದನ್ನು ಮಂಗಳವಾರ ವಾಹನ ಸವಾರರು ಗಮನಿಸಿದ್ದಾರೆ.

