Dailyhunt
ಬೀದಿ ಗೂಳಿ ಅಟ್ಟಹಾಸ: ಆಕ್ಟಿವಾ ಸವಾರನ ಮೇಲೆ ಭೀಕರ ದಾಳಿ; ಗಾಳಿಯಲ್ಲಿ ಎಸೆದು ತುಳಿದ ಪ್ರಾಣಿ

ಬೀದಿ ಗೂಳಿ ಅಟ್ಟಹಾಸ: ಆಕ್ಟಿವಾ ಸವಾರನ ಮೇಲೆ ಭೀಕರ ದಾಳಿ; ಗಾಳಿಯಲ್ಲಿ ಎಸೆದು ತುಳಿದ ಪ್ರಾಣಿ

ರಾಜ್‌ಕೋಟ್ ಎಪ್ರಿಲ್ 03: ಕೊಟ್ಡಾ ಸಂಗನಿ ತಾಲೂಕಿನ ವೆರಾವಲ್ ಗ್ರಾಮದಲ್ಲಿ ಬೀದಿ ಗೂಳಿಯೊಂದು ಆಕ್ಟಿವಾ ಸವಾರನ ಮೇಲೆ ಕ್ರೂರವಾಗಿ ದಾಳಿ ನಡೆಸಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ರೋಚಕ ಹಾಗೂ ಭೀಕರ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.
ಶಿವನಗರದ ಕಿರಿದಾದ ಓಣಿಯಲ್ಲಿ ವ್ಯಕ್ತಿಯೊಬ್ಬರು ಆಕ್ಟಿವಾ ಚಲಾಯಿಸುತ್ತಿದ್ದಾಗ, ಏಕಾಏಕಿ ನುಗ್ಗಿ ಬಂದ ಗೂಳಿ ಸವಾರನ ಮೇಲೆ ಮುಗಿಬಿದ್ದಿದೆ. ಸುಮಾರು ಮೂರು ನಿಮಿಷಗಳ ಕಾಲ ನಡೆದ ಈ ದಾಳಿಯಲ್ಲಿ, ಗೂಳಿ ತನ್ನ ಕೊಂಬುಗಳಿಂದ ಸವಾರನನ್ನು ಗಾಳಿಯಲ್ಲಿ ಎಸೆದಿದೆ. ಕೆಳಗೆ ಬಿದ್ದ ನಂತರವೂ ಪ್ರಾಣಿ ದಾಳಿಯನ್ನು ಮುಂದುವರಿಸಿದ್ದು, ಸವಾರನನ್ನು ತುಳಿಯಲು ಯತ್ನಿಸಿದೆ. ಘಟನೆಯನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ತಕ್ಷಣವೇ ಧಾವಿಸಿ, ತಮ್ಮ ಪ್ರಾಣದ ಹಂಗು ತೊರೆದು ಕೋಲುಗಳಿಂದ ಗೂಳಿಯನ್ನು ಓಡಿಸಲು ಯತ್ನಿಸಿದ್ದಾರೆ.

ಸತತ ಪ್ರಯತ್ನದ ನಂತರ ಗೂಳಿಯನ್ನು ದೂರವಿಡುವಲ್ಲಿ ಯಶಸ್ವಿಯಾದ ಜನರು, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯು ಸ್ಥಳೀಯ ಆಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಬೀದಿ ದನಗಳ ಹಾವಳಿ ತಡೆಗಟ್ಟುವಂತೆ ಆಗ್ರಹ ಕೇಳಿಬಂದಿದೆ. Rajkot, Gujarat - A horrifying incident of a stray animal attack was captured on CCTV in Shivnagar area of Veraval village in Rajkot district, where a young man on a moped was brutally crushed and injured by aggressive stray cattle. pic.twitter.com/B4Puywgju5- NextMinute News (@nextminutenews7) April 2, 2026
Dailyhunt
Disclaimer: This content has not been generated, created or edited by Dailyhunt. Publisher: themangaloremirror