Dailyhunt
ಗುರುಪುರ ತಿರುವಿನಲ್ಲಿ ಖಾಸಗಿ ಬಸ್ ಮತ್ತು ಲಾರಿ  ಮುಖಾಮುಖಿ ಡಿಕ್ಕಿ: ಚಾಲಕರು ಸೇರಿ ಹಲವರಿಗೆ ಗಾಯ

ಗುರುಪುರ ತಿರುವಿನಲ್ಲಿ ಖಾಸಗಿ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ: ಚಾಲಕರು ಸೇರಿ ಹಲವರಿಗೆ ಗಾಯ

ಮಂಗಳೂರು ಎಪ್ರಿಲ್ 08: : ಮಂಗಳೂರಿನಿಂದ ಮೂಡುಬಿದ್ರೆ ಕಡೆಗೆ ಚಲಿಸುತ್ತಿದ್ದ ಖಾಸಗಿ ಬಸ್ ಮತ್ತು ಹಾಗೂ ಲಾರಿ ನಡುವೆ ಗುರುಪುರ ಹೆದ್ದಾರಿಯ ತಿರುವಿನಲ್ಲಿ ಬುಧವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎರಡೂ ವಾಹನಗಳ ಚಾಲಕರು ಹಾಗೂ ಏಳು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಓವರ್‌ಟೇಕ್ ಮಾಡುವ ಭರದಲ್ಲಿದ್ದ ಬಸ್ಸಿಗೆ ಎದುರಿನಿಂದ ಬಂದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿಯ ಚಾಲಕ ಕ್ಯಾಬಿನ್‌ನಲ್ಲೇ ಸಿಲುಕಿಕೊಂಡಿದ್ದು, ಸ್ಥಳೀಯರು ಭಾರಿ ಹರಸಾಹಸ ಪಟ್ಟು ಹೊರತೆಗೆದಿದ್ದಾರೆ. ಹುಬ್ಬಳ್ಳಿ ಮೂಲದ ಈ ಕಂಟೇನರ್‌ನಲ್ಲಿ ಭಾರಿ ಪ್ರಮಾಣದ ಸರಕು ತುಂಬಿತ್ತು ಎನ್ನಲಾಗಿದೆ. ಗಾಯಾಳುಗಳನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳೀಯರು ಗ್ಯಾಸ್ ಕಟ್ಟರ್ ಮೂಲಕ ಲಾರಿ ಮತ್ತು ಬಸ್ಸಿನ ಕೆಲವು ಭಾಗಗಳನ್ನು ತುಂಡರಿಸಿ ಚಾಲಕರನ್ನು ಹೊರತೆಗೆದಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಾಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: themangaloremirror