ಭಾರತೀಯ ಚಿತ್ರರಂಗದ 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಅವರು ಜಾಗತಿಕ ಮಟ್ಟದಲ್ಲಿ ಮತ್ತೊಂದು ಅಪರೂಪದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಜಪಾನ್‌ನ ಟೋಕಿಯೊದಲ್ಲಿ ನಡೆಯಲಿರುವ ಪ್ರತಿಷ್ಠಿತ 'ಕ್ರಂಚೈರೋಲ್ ಅನಿಮೆ ಪ್ರಶಸ್ತಿ-2026' (Crunchyroll Anime Awards) ಸಮಾರಂಭದಲ್ಲಿ ಸತತ ಎರಡನೇ ಬಾರಿಗೆ ಭಾಗವಹಿಸುವ ಮೂಲಕ ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಚಿತ್ರನಟಿ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ.ಅನಿಮೇಟೆಡ್ ಸಿನಿಮಾ ಮತ್ತು ವೆಬ್ ಸರಣಿಗಳ ಸಾಧಕರಿಗಾಗಿ ನೀಡಲಾಗುವ ಈ ಪ್ರಶಸ್ತಿಗಳ 10ನೇ ಆವೃತ್ತಿಯು ಮೇ 23, 2026 ರಂದು ಟೋಕಿಯೊದ ಗ್ರ್ಯಾಂಡ್ ಪ್ರಿನ್ಸ್ ಹೋಟೆಲ್ ಶಿನ್ ತಕನಾವಾದಲ್ಲಿ ಜರುಗಲಿದೆ.

