Dailyhunt Logo
  • Light mode
    Follow system
    Dark mode
    • Play Story
    • App Story
'ಕರಾವಳಿ' ಟ್ರೈಲರ್ ಲಾಂಚ್ ವೇಳೆ ಹೈಡ್ರಾಮಾ; ರಾಜ್. ಬಿ ಶೆಟ್ಟಿ ಎದುರು ಸಿಡಿದೆದ್ದ ಪ್ರಜ್ವಲ್ ಫ್ಯಾನ್ಸ್

'ಕರಾವಳಿ' ಟ್ರೈಲರ್ ಲಾಂಚ್ ವೇಳೆ ಹೈಡ್ರಾಮಾ; ರಾಜ್. ಬಿ ಶೆಟ್ಟಿ ಎದುರು ಸಿಡಿದೆದ್ದ ಪ್ರಜ್ವಲ್ ಫ್ಯಾನ್ಸ್

ಬೆಂಗಳೂರು ಜುಲೈ 07: ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ರಜ್ವಲ್ ದೇವರಾಜ್ ನಟನೆಯ ಚಿತ್ರದಲ್ಲಿ ರಾಜ್‌. ಬಿ ಶೆಟ್ಟಿ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇಂದು ಗಾಂಧಿನಗರದ ಎಎಂಬಿ ಕಪಾಲಿ ಚಿತ್ರಮಂದಿರದಲ್ಲಿ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೀತಿತ್ತು.
ಈ ವೇಳೆ ಅಲ್ಲಿಗೆ ನುಗ್ಗಿದ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಕಿರಿಕ್ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಸ್ವತಹ ನಾಯಕ ಪ್ರಜ್ವಲ್ ದೇವರಾಜ್ ಅವರಿಗೆ ಆಹ್ವಾನ ಇರಲಿಲ್ಲ ಎನ್ನಲಾಗ್ತಿದೆ.ಅನುಶ್ರೀ 'ಕರಾವಳಿ' ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಹೋಗಿರುವ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಕಿರುಚಾಡಿ ಹೈಡ್ರಾಮಾ ಮಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕಾರ್ಯಕ್ರಮಕ್ಕೆ ಸ್ವತಃ ಪ್ರಜ್ವಲ್ ದೇವರಾಜ್ ಅವರನ್ನು ಆಹ್ವಾನಿಸಿಲ್ಲ, ಚಿತ್ರದಲ್ಲಿ ಅವರ ಧ್ವನಿ ಬಳಸಿಕೊಳ್ಳುತ್ತಿಲ್ಲ, ಬದಲಿಗೆ ಬೇರೆಯವರಿಂದ ಡಬ್ ಮಾಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾತ್ರಿವರೆಗೂ ಕಾರ್ಯಕ್ರಮಕ್ಕೆ ಬರುವುದಾಗಿ ಪ್ರಜ್ವಲ್ ಹೇಳುತ್ತಿದ್ದರು. ಈಗ ಯಾಕೆ ಬರಲಿಲ್ಲ ಎನ್ನುವುದು ಗೊತ್ತಿಲ್ಲ ಎಂದು ನಿರ್ದೇಶಕ ಗುರುದತ್ ಗಾಣಿಗ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ.ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಪ್ರಜ್ವಲ್ ದೇವರಾಜ್ ಅಭಿಮಾನಿಗಳ ಗಲಾಟೆ ಹೆಚ್ಚಾಗುತ್ತಿದ್ದಂತೆ ಚಿತ್ರತಂಡ, ಪ್ರವೀಣ್ ಶೆಟ್ಟಿ ಹಾಗೂ ಪ್ರಜ್ವಲ್ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಗಲಾಟೆ ಹೆಚ್ಚಾಗಿದೆ.

ಚಿತ್ರದ ಪಾತ್ರಕ್ಕೆ ಪ್ರಜ್ವಲ್ ವಾಯ್ಸ್ ಸೂಟ್ ಆಗುತ್ತಾ ಇಲ್ವೊ ಅನ್ನೋ ಅನುಮಾನ ಇತ್ತು. ಆದರೂ ಡಬ್ಬಿಂಗ್ ಮಾಡಿಸಲು ಸ್ಟುಡಿಯೋ ಬ್ಲಾಕ್ ಮಾಡಿದೀವಿ ಎಂದು ನಿರ್ದೇಶಕರು ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ.ಪ್ರಜ್ವಲ್ ದೇವರಾಜ್ ಸಂಭಾವನೆಚಿತ್ರದಲ್ಲಿ ನಾಯಕನಾಗಿ ನಟಿಸಿರು ಪ್ರಜ್ವಲ್ ದೇವರಾಜ್ ಸಂಭಾವನೆ ವಿಚಾರದ ಬಗ್ಗೆ ಕೂಡ ಗುರು ಮಾತನಾಡಿದ್ದಾರೆ. ಪ್ರಜ್ವಲ್ ಅವರಿಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ ಕೊಡುವ ಬಗ್ಗೆ ಮಾತುಕತೆ ಆಗಿದೆ.

ಈಗಾಗಲೇ 1 ಕೋಟಿ ರೂ. ಕೊಟ್ಟಿದ್ದೀವಿ.. ಇನ್ನು 25 ಲಕ್ಷ ರೂ. ಕೊಡೋದು ಬಾಕಿ ಇದೆ.

ಟ್ರೈಲರ್ ಬಿಡುಗಡೆ ಬಳಿಕ ಡಬ್ ಮಾಡಲು ನಾವು ಅವರಿಗೆ ಹೇಳಿದ್ದೆವು. ಆದ್ರೆ ಅದಕ್ಕೆ ಪ್ರತಿಕ್ರಿಯಿಸಿಲ್ಲ. ರಾಜ್ ಬಿ. ಶೆಟ್ಟಿ ಚಿತ್ರದಲ್ಲಿ ಇರೋದ್ರಿಂದ ಪ್ರಜ್ವಲ್ ದೇವರಾಜ್‌ ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ.

ಈ ಪಾತ್ರಕ್ಕೆ ದೊಡ್ಡ ಸ್ಟಾರ್ ನಟ ಬರಬಹುದು ಎಂದು ಮೊದಲೇ ಹೇಳಿದ್ದೆವು. ಅದ್ಕೆ ಪ್ರಜ್ವಲ್ ಒಪ್ಪಿಕೊಂಡಿದ್ದರು. ಎರಡು ತಿಂಗಳಿಂದ ಪ್ರಜ್ವಲ್ ನಮಗೆ ಕನೆಕ್ಟ್ ಆಗಿಲ್ಲ.. ಬ್ಯುಸಿ ಅಂತ ಅವರ ಮ್ಯಾನೇಜರ್ ಹೇಳಿದ್ರು..

ಪ್ರಜ್ವಲ್ ಫ್ಯಾನ್ಸ್ ಬೇಕೆಂದೇ ಗಲಾಟೆ ಮಾಡುತ್ತಿದ್ದಾರೆ ಅನ್ನಿಸ್ತಿದೆ ಎಂದು ಗುರುದತ್ ವಿವರಿಸಿದ್ದಾರೆ.ರಾಜ್ ಬಿ ಶೆಟ್ಟಿ ಟಾಂಗ್ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಕಾರ್ಯಕ್ರಮಕ್ಕೆ ಬಂದು ಗಲಾಟೆ ಮಾಡುವ ವೇಳೆ ನಟ ರಾಜ್‌. ಬಿ ಶೆಟ್ಟಿ ಮೂಕ ಪ್ರೇಕ್ಷಕನಂತೆ ನೋಡುವಂತಾಗಿತ್ತು. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾತ್ರ ಮಾಡಿದ್ದೀನಿ.

ಪೋಸ್ಟರ್, ಟೀಸರ್ ಎಲ್ಲದರಲ್ಲೂ ಪ್ರಜ್ವಲ್ ಹೆಸರು ಇದೆ. ಅಂದಹಾಗೆ ನಾನು ಈ ಚಿತ್ರಕ್ಕೆ ಮೊದಲ ಆಯ್ಕೆ ಆಗಿರಲಿಲ್ಲ. ನನಗಿಂತ ದೊಡ್ಡ ಕಲಾವಿದರ ನಟಿಸ್ಬೇಕಿತ್ತು. ಕಾರಣಾಂತರಗಳಿಂದ ನಾನು ನಟಿಸುವಂತಾಯ್ತು.

ನಾನು ಕಾಂಪಿಟೇಷನ್ ಮಾಡಲು ಬಂದಿಲ್ಲ. ನಾನು, ನನ್ನದು ಅಂದ್ರೆ ನಡೆಯಲ್ಲ. ಸಿನ್ಮಾ ನನಗಿಂತ ದೊಡ್ಡದು. ನನ್ನ ಹೆಸರು ಹಾಕದಿದ್ರು ನಾನು ಕೇಳಲ್ಲ.

ಕಾರಣ ಸಿನಿಮಾ ಎಲ್ಲಕ್ಕಿಂತ ದೊಡ್ಡದು ಎಂದಿದ್ದಾರೆ. ಪ್ರಜ್ವಲ್ ದೇವರಾಜ್ ಜೊತೆ ಮನುಷ್ಯನ ರೀತಿ ಕೂತು ಮಾತನಾಡಬೇಕು. ಮನುಷತ್ವ ಮುಖ್ಯ. ಇದು ನಿಜಕ್ಕೂ ಬೇಸರದ ಸಂಗತಿ.

ಇಲ್ಲಿ ಕಾಂಪಿಟೇಷನ್ ಎಲ್ಲಿಂದ ಬಂತು. ನಾಯಕಿಯರು, ಮಿತ್ರಾ ಸರ್ ನಟಿಸಿಲ್ವಾ.. ಮಿತ್ರಾ ಅವರಿಗಿಂತ ದೊಡ್ಡ ಕಲಾವಿದನಾ ನಾನು.. ಇದು ಬೇಕಿರಲಿಲ್ಲ. ನಮ್ಮ ಇಂಡಸ್ಟ್ರಿ ಯಾಕೆ ಉದ್ಧಾರ ಆಗಲ್ಲ ಎಂದು ಕೆಲವರು ಕೇಳ್ತಾರೆ. ಇದು ಕೂಡ ಒಂದು ಕಾರಣ. ಈ ಚಿತ್ರದಿಂದ ಪ್ರಜ್ವಲ್ ಅವರಿಗೆ ದೊಡ್ಡ ಹೆಸರು ಬಂದ್ರೆ ನಾನು ಖುಷಿಪಡ್ತೀನಿ, ನನ್ನ ಹಿಂದಿನ ಸಿನಿಮಾಗಳಲ್ಲಿ ಹೆಸರು ಹಾಕ್ಬೇಕು, ಕಟೌಟ್ ಹಾಕಬೇಖು ಎಂದು ನಾನು ಕೇಳಿಲ್ಲ, ಕೇಳಲ್ಲ ಎಂದು ರಾಜ್ ಬಿ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: themangaloremirror