ಕೇಸರಿಯನ್ನು ಸಂಸ್ಕೃತದಲ್ಲಿ ಕುಂಕುಮ ಎನ್ನುತ್ತಾರೆ. ಬಾಹ್ಯ ಮತ್ತು ಆಂತರಿಕ ಬಳಕೆಗಾಗಿ ಅನೇಕ ಔಷಧಿಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಅಧಿಕ ಋತುಸ್ರಾವಕ್ಕೆ ಕೇಸರಿಯನ್ನು ಬಳಸಿಕೊಂಡು ತಯಾರಿಸಬಹುದಾದ ಸರಳವಾದ ಆಯುರ್ವೇದ ಮನೆಮದ್ದು ಇಲ್ಲಿದೆ.ಬೇಕಾಗುವ ಸಾಮಗ್ರಿಗಳು: ಕೇಸರಿ - ಒಂದು ತೆಳುವಾದ ಎಳೆ ಜೇನುತುಪ್ಪ - 1 ಟೀಸ್ಪೂನ್ ತಯಾರಿಸುವ ವಿಧಾನ: ಕೇಸರಿಯ ತೆಳುವಾದ ಎಳೆಯನ್ನು ತೆಗೆದುಕೊಂಡು, ಅದನ್ನು ಸಣ್ಣದಾಗಿ ತುಂಡರಿಸಿ.
ಕೇಸರಿಯನ್ನು ಗಾಳಿಯಾಡದ ಡಬ್ಬದಲ್ಲಿ ಒಂದು ವರ್ಷ ಸಂಗ್ರಹಿಸಬಹುದು.ಇದು ಹೇಗೆ ಕೆಲಸ ಮಾಡುತ್ತದೆ? ಕೇಸರಿ ತುಂಬಾ ಉಪಯುಕ್ತವಾಗಿದೆ. ಇದು ರಕ್ತಸ್ರಾವವನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಇದು ಆಂಟಿ ಸ್ಪಾಸ್ಮೊಡಿಕ್ ಆಗಿಯೂ ಕಾರ್ಯನಿರ್ವಹಿಸುತ್ತದೆ, ಮುಟ್ಟಿನ ಸಮಯದಲ್ಲಿ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.ಮಕ್ಕಳಿಗೆ ಸುರಕ್ಷಿತವೇ?
ಇದನ್ನು ಮೂರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಲ್ಲಿ ಸುರಕ್ಷಿತವಾಗಿ ಬಳಸಬಹುದು, ಸ್ಪಾಸ್ಮೊಡಿಕ್ ಹೊಟ್ಟೆ ನೋವಿಗೆ 3 - 4 ದಿನಗಳ ಕಾಲ ಉಪಯೋಗಿಸಬಹುದು.ಗರ್ಭಿಣಿಯರಿಗೆ ಸುರಕ್ಷಿತವೇ? ಗರ್ಭಿಣಿಯರಿಗೆ ಇದು ಸುರಕ್ಷಿತವಾಗಿದೆ. ಹಾಲುಣಿಸುವ ತಾಯಿಯರಿಗೆ ಸುರಕ್ಷಿತವಾಗಿದೆ.ಯಾವುದೇ ಅಡ್ಡ ಪರಿಣಾಮಗಳು? ಸೂಚಿಸಿದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯವುದೇ ಕಾರಣಕ್ಕೆ ಸೇವಿಸಬಾರದು.ಈ ಬರಹವನ್ನು ಡಾ.
ಜನಾರ್ಧನ ಹೆಬ್ಬಾರ್ ಅವರು ಬರೆದಿರುವ ಪುಸ್ತಕದಿಂದ ಆರಿಸಲಾಗಿದೆ.ಲೇಖಕರು: ಡಾ. ಜನಾರ್ಧನ ವಿ ಹೆಬ್ಬಾರ್‌ಆಯುರ್ವೇದ ವೈದ್ಯರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಈಝೀ ಆಯುರ್ವೇದ ಆಸ್ಪತ್ರೆ, ಮಂಗಳೂರುEasy Ayurveda Hospital Next to Emphasis Morgan's Gate Jeppu, Mangaloreಈ ಲೇಖನವನ್ನು ಡಾ. ಜನಾರ್ಧನ ವಿ ಹೆಬ್ಬಾರ್ ಅವರು ಬರೆದ "ಹಿತ್ತಲ ಗಿಡವೇ ಮದ್ದು " ಎಂಬ ಪುಸ್ತಕದಿಂದ ಆರಿಸಲಾಗಿದೆ. ಈ ಪುಸ್ತಕವನ್ನು ಖರೀದಿಸಲು ಸಂಪರ್ಕಿಸಿ: 86188 98900 / 8867385567

