Dailyhunt Logo
  • Light mode
    Follow system
    Dark mode
    • Play Story
    • App Story
ಮಹಾರಾಷ್ಟ್ರ: ಭಿವಂಡಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 9 ಸಾವು; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ!

ಮಹಾರಾಷ್ಟ್ರ: ಭಿವಂಡಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 9 ಸಾವು; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ!

ಹಾರಾಷ್ಟ್ರ ಜುಲೈ 31: ಮಹಾರಾಷ್ಟ್ರದ ಭಿವಂಡಿಯಲ್ಲಿ ಶುಕ್ರವಾರ ಜುಲೈ 31ರಂದು ಬೆಳಗಿನ ಜಾವ ನಾಲ್ಕು ಅಂತಸ್ತಿನ ವಸತಿ ಕಟ್ಟಡವೊಂದು ಧರಾಶಾಹಿಯಾದ ಪರಿಣಾಮ ಕನಿಷ್ಠ 9 ಜನರು ಜೀವ ಕಳೆದುಕೊಂಡಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಭಿವಂಡಿಯ ಬಾಲಾಜಿ ನಗರ ಪ್ರದೇಶದಲ್ಲಿರುವ 'ಕೊಹಿನೂರ್' ಕಟ್ಟಡದ ಅಂಗಳದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಈ ಕಟ್ಟಡವು ಪ್ರತಿ ಮಹಡಿಯಲ್ಲಿ 12 ಕೊಠಡಿಗಳಂತೆ ಒಟ್ಟು 48 ಕೊಠಡಿಗಳನ್ನು ಹೊಂದಿತ್ತು. ಇದನ್ನು ಅತ್ಯಂತ ಅಪಾಯಕಾರಿ ಕಟ್ಟಡವೆಂದು ಸ್ಥಳೀಯ ಪುರಸಭೆ ಆಡಳಿತ ಈಗಾಗಲೇ ಘೋಷಿಸಿತ್ತು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಗುರುವಾರ ರಾತ್ರಿ 9.00 ಗಂಟೆಯ ಸುಮಾರಿಗೆ ಕಟ್ಟಡದಿಂದ ಸತತವಾಗಿ ದೊಡ್ಡ ಬಿರುಕು ಬಿಡುವ ಭೀಕರ ಶಬ್ದಗಳು ಕೇಳಿಬಂದಿದ್ದವು. ಅನಾಹುತದ ಮುನ್ಸೂಚನೆ ಅರಿತ ಸ್ಥಳೀಯರು ತಕ್ಷಣವೇ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ನೆರವಾದರು. ಆದರೆ, ಗುರುವಾರ ರಾತ್ರಿ 11.30ರ ಸುಮಾರಿಗೆ ಕೆಲ ನಿವಾಸಿಗಳು ಹೊರಬರುತ್ತಿದ್ದಂತೆಯೇ ಕಟ್ಟಡದ 'ಬಿ' ವಿಂಗ್ ಸಂಪೂರ್ಣವಾಗಿ ನೆಲಸಮವಾಯಿತು. ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF), ಥಾಣೆ ವಿಪತ್ತು ನಿರ್ವಹಣಾ ಪಡೆ ಮತ್ತು ಸ್ಥಳೀಯ ಅಗ್ನಿಶಾಮಕ ದಳ ಧಾವಿಸಿದ್ದು, ಜಂಟಿಯಾಗಿ ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಶ್ವಾನ ದಳ, 4 ಅಗ್ನಿಶಾಮಕ ವಾಹನಗಳು, 2 ಆಂಬ್ಯುಲೆನ್ಸ್‌ಗಳು ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕೆಲಸ ಭರದಿಂದ ಸಾಗಿದೆ.
Dailyhunt
Disclaimer: This content has not been generated, created or edited by Dailyhunt. Publisher: themangaloremirror