Dailyhunt
ಮಂಗಳೂರು: ವಿದ್ಯಾರ್ಥಿಗಳಿಂದಲೇ ಡ್ರಗ್ಸ್‌ ಪೆಡ್ಲಿಂಗ್‌; ವಿಧ್ಯಾರ್ಥಿಯೊಬ್ಬನ ತಾಯಿ ನೀಡಿದ ಮಾಹಿತಿಯಿಂದ ಬಯಲಾಯ್ತು ಅಕ್ರಮ ಜಾಲ!

ಮಂಗಳೂರು: ವಿದ್ಯಾರ್ಥಿಗಳಿಂದಲೇ ಡ್ರಗ್ಸ್‌ ಪೆಡ್ಲಿಂಗ್‌; ವಿಧ್ಯಾರ್ಥಿಯೊಬ್ಬನ ತಾಯಿ ನೀಡಿದ ಮಾಹಿತಿಯಿಂದ ಬಯಲಾಯ್ತು ಅಕ್ರಮ ಜಾಲ!

ಮಂಗಳೂರು ಎಪ್ರಿಲ್ 08: ಮಂಗಳೂರು ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಐವರು ವಿದ್ಯಾರ್ಥಿಗಳು ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಮಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ತನ್ನ ಮಗನ ಬಳಿ ಗಾಂಜಾ ಪ್ಯಾಕೆಟ್ ಇರುವುದನ್ನು ಗಮನಿಸಿದ ತಾಯಿಯೊಬ್ಬರು ನೀಡಿದ ಖಚಿತ ಮಾಹಿತಿ ಈ ದೊಡ್ಡ ದಂಧೆಯನ್ನು ಮಟ್ಟಹಾಕಲು ನೆರವಾಗಿದೆ.
ಬಂಧಿತ ವಿದ್ಯಾರ್ಥಿಗಳು ಕಾಲೇಜು ಹಾಸ್ಟೆಲ್‌ಗಳನ್ನು ಬಿಟ್ಟು ಹೊರಗಡೆ ತಾವೇ ಪ್ರತ್ಯೇಕವಾಗಿ ರೂಮ್ ಮಾಡಿಕೊಂಡಿದ್ದರು. ಅಲ್ಲಿಯೇ ಡ್ರಗ್ಸ್ ತಂದು ಸಣ್ಣ ಸಣ್ಣ ಪ್ಯಾಕೆಟ್ ಮಾಡಿ ಇತರೆ ವಿದ್ಯಾರ್ಥಿಗಳಿಗೆ ಪೂರೈಸುತ್ತಿದ್ದರು ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. ಈ ಗ್ಯಾಂಗ್ ನಗರದ 6 ಕಾಲೇಜುಗಳ ಸುಮಾರು 40 ವಿದ್ಯಾರ್ಥಿಗಳು ಹಾಗೂ 10 ಮಂದಿ ಹೊರಗಿನವರಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಮಕ್ಕಳು ಹಾಸ್ಟೆಲ್ ಬಿಟ್ಟು ಹೊರಗೆ ರೂಮ್ ಮಾಡಿಕೊಂಡಾಗ ಪೋಷಕರು ಹೆಚ್ಚಿನ ನಿಗಾ ಇಡಬೇಕು. ಮಕ್ಕಳ ನಡತೆಯಲ್ಲಿ ಬದಲಾವಣೆ ಕಂಡರೆ ತಕ್ಷಣ ಗಮನಿಸಿ," ಎಂದು ಕಮಿಷನರ್ ಸಲಹೆ ನೀಡಿದ್ದಾರೆ. ಸದ್ಯ ಬಂಧಿತ ಐವರು ವಿದ್ಯಾರ್ಥಿಗಳು ಮೇಜರ್ ಆಗಿದ್ದು, ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಸರುಗಳನ್ನು ಗೌಪ್ಯವಾಗಿಡಲಾಗಿದೆ. ಗಾಂಜಾ ಸೇವನೆ ಮಾಡುತ್ತಿದ್ದ 40 ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಪೊಲೀಸರು ಕೌನ್ಸೆಲಿಂಗ್ ನಡೆಸಲಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: themangaloremirror