ಈ ಕುರಿತು ಉಡುಪಿ ಶ್ರೀ ಪೇಜಾವರ ಮಠ ಹಾಗೂ ಗೋವರ್ಧನಗಿರಿ ಟ್ರಸ್ಟ್ (ನೀಲಾವರ ಗೋಶಾಲೆ) ಜಂಟಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ಇಂತಹ ಯಾವುದೇ ಅನಧಿಕೃತ ಜಾಲಗಳಿಗೆ ಹಣ ನೀಡಿ ಮೋಸ ಹೋಗಬಾರದು ಎಂದು ಮನವಿ ಮಾಡಿದೆ. ಉಡುಪಿ ಭಾರತೀಶ ಜುವೆಲ್ಲರ್ಸ್‌ನ ಶಶಿಧರ ಭಟ್ ಎಂಬಾತ ʼನೀಲಾವರ ಗೋಗ್ರಾಸ ಸೇವಾ ತಂಡʼ ಎಂಬ ತಂಡ ವನ್ನು ರಚಿಸಿದ್ದು, ಸಾರ್ವಜನಿಕ ದೇಣಿಗೆಗಳನ್ನೂ ಪಡೆದಿರುವ ಮಾಹಿತಿ ತಿಳಿದು ಬಂದಿದೆ. ಪೇಜಾವರ ಸ್ವಾಮೀಜಿ ಹಾಗೂ ಟ್ರಸ್ಟ್‌ನ ಗಮನಕ್ಕೆ ಬಾರದೆ ಅನಧಿಕೃತವಾಗಿ, ಸ್ವಾಮೀಜಿಯ ಫೋಟೋ ಹಾಗೂ ಮಠದ ಹೆಸರನ್ನು ಮನವಿಗಳಲ್ಲಿ ಬಳಸಿ ದೇಣಿಗೆ ಸಂಗ್ರಹ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಆದುದರಿಂದ ಶಶಿಧರ್ ಭಟ್ ನನ್ನು ತಕ್ಷಣದಿಂದ ನೀಲಾವರ ಗೋಶಾಲೆಯ ಟ್ರಸ್ಟ್‌ನಿಂದ ವಜಾ ಮಾಡಲಾಗಿದೆ. ಗೋಶಾಲೆಗೂ ಅವರ ತಂಡಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಸಾರ್ವಜನಿಕರು ಮೋಸ ಹೋಗಬಾರದು. ಗೋಶಾಲೆಗೆ ದೇಣಿಗೆ ನೀಡುವವರು ಟ್ರಸ್ಟ್‌ನ ಅಧಿಕೃತ ರಶೀದಿಯನ್ನು ಕಡ್ಡಾಯವಾಗಿ ಪಡೆಯಬೇಕೆಂದು ಪೇಜಾವರ ಅಧೋಕ್ಷಜ ಮಠದ ಗೋವರ್ಧನಗಿರಿ ಟ್ರಸ್ಟ್‌ನ ವಿಶ್ವಸ್ಥ ಲಕ್ಷ್ಮೀನಾರಾಯಣ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.