Dailyhunt Logo
  • Light mode
    Follow system
    Dark mode
    • Play Story
    • App Story
ಪುತ್ತೂರು: ಪತ್ರಿಕಾಭವನದ ಬಳಿ ಕಾಂಗ್ರೆಸ್‌ ಶಾಸಕರಿಂದ ಗೂಂಡಾಗಿರಿ: ಬಿಜೆಪಿ ಆಕ್ರೋಶ

ಪುತ್ತೂರು: ಪತ್ರಿಕಾಭವನದ ಬಳಿ ಕಾಂಗ್ರೆಸ್‌ ಶಾಸಕರಿಂದ ಗೂಂಡಾಗಿರಿ: ಬಿಜೆಪಿ ಆಕ್ರೋಶ

ಪುತ್ತೂರು: ನಗರದ ಪತ್ರಿಕಾಭವನದ ಬಳಿ ಕಾಂಗ್ರೆಸ್ ಶಾಸಕರು ಹಾಗೂ ಅವರ ಬೆಂಬಲಿಗರು ನಡೆಸಿದ್ದಾರೆ ಎನ್ನಲಾದ ಶಾಂತಿಭಂಗದ ಕೃತ್ಯವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಹಾಗೂ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಶಾಸಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಸರ್ಕಾರಿ ಆಸ್ಪತ್ರೆ ಇರುವಂತಹ ಸೂಕ್ಷ್ಮ ಪ್ರದೇಶದಲ್ಲಿ ಶಾಸಕರು ಮತ್ತು ಅವರ ಬೆಂಬಲಿಗರು ಈ ರೀತಿಯಾಗಿ ವರ್ತಿಸಿರುವುದು ಖಂಡನೀಯ. ಪತ್ರಿಕಾಗೋಷ್ಠಿ ನಡೆಸಲು ಬಂದ ವ್ಯಕ್ತಿಗೆ ತಡೆಯೊಡ್ಡಿ, ಆತನ ಮೇಲೆಯೇ ಹಲ್ಲೆಗೆ ಯತ್ನಿಸಲಾಗಿದೆ. ಅಷ್ಟೇ ಅಲ್ಲದೆ, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಆತನನ್ನು ಜೀಪಿನಲ್ಲಿ ಕುಳ್ಳಿರಿಸಿ ಕರೆದೊಯ್ಯುವಾಗ ಜೀಪನ್ನು ಹಿಂಬಾಲಿಸಿ ಗೂಂಡಾಗಿರಿ ಮೆರೆದಿದ್ದಾರೆ" ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.ಒಂದು ಕಾಲದಲ್ಲಿದ್ದ ಗೂಂಡಾ ಸಂಸ್ಕೃತಿಯನ್ನು ಶಾಸಕರು ಪುತ್ತೂರಿನಲ್ಲಿ ಮತ್ತೆ ಜೀವಂತಗೊಳಿಸಲು ಹೊರಟಿದ್ದಾರೆ. ಸಾರ್ವಜನಿಕ ಶಾಂತಿಗೆ ಭಂಗ ತಂದಿರುವ ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ಪೊಲೀಸ್ ಇಲಾಖೆ ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: themangaloremirror