Dailyhunt Logo
  • Light mode
    Follow system
    Dark mode
    • Play Story
    • App Story
ಪುತ್ತೂರು: ಪೋಕ್ಸೋ ಕೇಸ್ ಆರೋಪಿ ಅದ್ದು ಪಡೀಲ್ ಬಂಧನಕ್ಕೆ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಆಗ್ರಹ

ಪುತ್ತೂರು: ಪೋಕ್ಸೋ ಕೇಸ್ ಆರೋಪಿ ಅದ್ದು ಪಡೀಲ್ ಬಂಧನಕ್ಕೆ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಆಗ್ರಹ

ಪುತ್ತೂರು ಅಗಸ್ಟ್ 28: : ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರ ಆಪ್ತ ಅದ್ದು ಪಡೀಲ್ ಎಂಬಾತನನ್ನು ಘಟನೆ ನಡೆದು ಐದು ದಿನ ಕಳೆದರೂ ಬಂಧಿಸದಿರುವುದನ್ನು ಖಂಡಿಸಿ, ಅವರನ್ನೇ ತಕ್ಷಣ ಬಂಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಒತ್ತಾಯಿಸಿದ್ದಾರೆ.
ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಕೀಂ, ಸ್ಥಳೀಯ ಶಾಸಕ ಅಶೋಕ್ ರೈ ವಿರುದ್ಧವೇ ಗಂಭೀರ ಆರೋಪಗಳ ಸುರಿಮಳೆಗೈದಿದ್ದಾರೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಆರೋಪಿ ಅದ್ದು ಪಡೀಲ್ ವಿಷಯದಲ್ಲಿ ಶಾಸಕರು ಮೃದು ಧೋರಣೆ ತಳೆದಿದ್ದಾರೆ. ಇತರ ಪ್ರಕರಣಗಳಲ್ಲಿ ಅತ್ಯಂತ ಚುರುಕಾಗಿ ಕೆಲಸ ಮಾಡುವ ಪೊಲೀಸ್ ಇಲಾಖೆ, ಈ ವಿಷಯದಲ್ಲಿ ಸಂಪೂರ್ಣ ನಿಷ್ಕ್ರಿಯವಾಗಿದೆ. ಕೋಮುಗಲಭೆಗೆ ಹುನ್ನಾರ ನಡೆಸುವಂತಹ ವ್ಯಕ್ತಿಯನ್ನು ಶಾಸಕರು ತಮ್ಮ ಜತೆಯಲ್ಲಿಯೇ ಇಟ್ಟುಕೊಂಡಿದ್ದಾರೆ ಎಂದು ಹಕೀಂ ಆರೋಪಿಸಿದರು.ಆರೋಪಿ ಅದ್ದು ಪಡೀಲ್ ಹಿಂದೆ ನಗರಸಭೆ ಅಧ್ಯಕ್ಷೆಗೆ ಹಾಗೂ ಇನ್ನೋರ್ವ ಮಹಿಳೆಗೆ ನಿಂದನೆ ಮಾಡಿದ್ದಾಗ ಶಾಸಕರೇ ಆತನಿಗೆ ಜಾಮೀನು ಕೊಡಿಸಿ ಬಿಡಿಸಿದ್ದರು. ಒಂದು ವರ್ಷದ ಹಿಂದೆ ಈತನ ಅಶ್ಲೀಲ ವಿಡಿಯೋ ಹೊರಬಿದ್ದಾಗಲೂ ಶಾಸಕರು ಮೌನ ವಹಿಸಿದ್ದರು. ಈಗ ಆತ ಗಂಭೀರ ಪೋಕ್ಸೋ ಕೇಸ್‌ನಲ್ಲಿ ಸಿಲುಕಿದ್ದರೂ ಬಂಧನವಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಆರೋಪಿಗೆ ಶಾಸಕರು ಮತ್ತು ಕಾಂಗ್ರೆಸ್ ನಾಯಕರೇ ಆಶ್ರಯ ನೀಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ ಹಕೀಂ ಕೂರ್ನಡ್ಕ, "ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಕ್ಷಣವೇ ಕಾಂಗ್ರೆಸ್ ನಾಯಕರ ಮನೆಗಳಲ್ಲಿ ಹುಡುಕಾಟ ನಡೆಸಿ ಆರೋಪಿಯನ್ನು ಬಂಧಿಸಬೇಕು" ಎಂದು ಆಗ್ರಹಿಸಿದರು.
Dailyhunt
Disclaimer: This content has not been generated, created or edited by Dailyhunt. Publisher: themangaloremirror