ಶಿವಮೊಗ್ಗ ,ಏಪ್ರಿಲ್ 02: ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಮಾಲೀಕನೋರ್ವ ತನ್ನದೇ ಹೋಟೆಲ್‌ನ ಹೆಡ್ ಕುಕ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ.ಬಿಹಾರ ಮೂಲದ ಟಿಂಕು ಶರ್ಮ (28) ಕೊಲೆಯಾದ ದುರ್ದೈವಿ. ಸಾಗರದ 'ರೂಫ್ ಟಾಪ್ ಕೆಫೆ ಮತ್ತು ಗೇಮ್ ಜೋನ್' ಹೋಟೆಲ್ ಮಾಲೀಕ ಇಮ್ರಾನ್ (34) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

