ಮಾರ್ಚ್ 31 ರಂದು ಬೆಂಗಳೂರಿನಲ್ಲಿ ನಡೆದ ಅಂತಿಮ ವಿಧಿವಿಧಾನಗಳ ನಂತರ, ಪ್ರಕಾಶ್ ರಾಜ್ ಅವರು ಈ ಹಿಂದೆ ನೀಡಿದ್ದ "ನಾನು ನಾಸ್ತಿಕ" ಎಂಬ ಹೇಳಿಕೆಯ ಹಳೆಯ ವಿಡಿಯೋಗಳನ್ನು ಇಂದಿನ ಅಂತ್ಯಕ್ರಿಯೆಯ ದೃಶ್ಯಗಳೊಂದಿಗೆ ಜೋಡಿಸಿ ನೆಟ್ಟಿಗರು ಟೀಕಿಸಿದ್ದರು. ಇದಕ್ಕೆ ಎಕ್ಸ್ (X) ಮೂಲಕ ಪ್ರತಿಕ್ರಿಯಿಸಿರುವ ನಟ, "ಹೌದು, ನಾನು ದೇವರನ್ನು ನಂಬುವುದಿಲ್ಲ. ಆದರೆ ನನ್ನ ತಾಯಿ ತನ್ನ ದೇವರನ್ನು ನಂಬಿದ್ದಳು. ಆಕೆಯ ನಂಬಿಕೆಯ ಪ್ರಕಾರ ಅಂತ್ಯಸಂಸ್ಕಾರ ಮಾಡುವ ಹಕ್ಕನ್ನು ನಿರಾಕರಿಸಲು ನಾನು ಯಾರು? ಇದು ನಾವು ಒಬ್ಬರಿಗೊಬ್ಬರು ನೀಡುವ ಮೂಲಭೂತ ಗೌರವ" ಎಂದು ಬರೆಯುವ ಮೂಲಕ ದ್ವೇಷಪೂರಿತ ಕಾಮೆಂಟ್‌ಗಳಿಗೆ ಅಂತ್ಯ ಹಾಡಿದ್ದಾರೆ. ಪ್ರಕಾಶ್ ರಾಜ್ ಅವರ ಈ ನಡೆಯನ್ನು ಅನೇಕ ಅಭಿಮಾನಿಗಳು ಮತ್ತು ಚಿಂತಕರು ಬೆಂಬಲಿಸಿದ್ದಾರೆ.